HEALTH TIPS

ಭಾರತದಲ್ಲಿ 8 ಲಕ್ಷ ಜನ ಬಳಸುವ ನೀರನ್ನು ಎಐ ಒಂದೇ ಬಳಸುತ್ತಿದೆ: ಪರಿಸರವಾದಿಗಳ ಆತಂಕ

ಠಾಣೆ: ಕೃತಕ ಬುದ್ಧಿಮತ್ತೆ(ಎಐ) ಹಾಗೂ ಕ್ಲೌಡ್ ಕಂಪ್ಯೂಟಿಂಗ್ ವಲಯಗಳಿಂದ ಭಾರತದಲ್ಲಿ ವಾರ್ಷಿಕ 3,750 ಕೋಟಿ ಲೀಟರ್ ನೀರು ಬಳಕೆ ಮಾಡಲಾಗುತ್ತಿದೆ. ಇದು 7 ರಿಂದ 8 ಲಕ್ಷ ಜನರ ವಾರ್ಷಿಕ ನೀರಿನ ಬಳಕೆಗೆ ಸಮನಾಗಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈನಂತಹ ಮಹಾನಗರವು ಒಂದು ವಾರ ಬಳಸಬಹುದಾದ ನೀರನ್ನು ಎಐ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ವಲಯಗಳು ವಾರ್ಷಿಕವಾಗಿ ವ್ಯತ್ಯಯ ಮಾಡುತ್ತಿವೆ ಎಂದು ನಟ್‌ಕನೆಕ್ಟ್‌ ಫೌಂಡೇಶನ್ ತಿಳಿಸಿದೆ.

ನಟ್‌ಕನೆಕ್ಟ್‌ ನಿರ್ದೇಶಕ ಬಿ.ಎನ್ ಕುಮಾರ್ ಅವರು ಕಳೆದ ತಿಂಗಳು ಪ್ರಧಾನ ಮಂತ್ರಿ ಕಚೇರಿಗೆ ಬರೆದಿದ್ದ ಪತ್ರದಲ್ಲಿ, 'ಕೈಗಾರಿಕೆಗಳ ಬೆಳವಣಿಗೆಯು ಭಾರತದಲ್ಲಿ ನೀರಿನ ಅಭಾವಕ್ಕೆ ಕಾರಣವಾಗಬಹುದು' ಎಂದು ತಿಳಿಸಿದ್ದರು.

ಆ ಪತ್ರಕ್ಕೆ ಉತ್ತರ ನೀಡಿರುವ ಜಲಶಕ್ತಿ ಸಚಿವಾಲಯವು, ದೇಶದ ಡೇಟಾ ಸೆಂಟರ್‌ ಬಳಕೆಯು 2020ರಲ್ಲಿ 375 ಮೆಗಾವ್ಯಾಟ್‌ ಇತ್ತು, 2025ರಲ್ಲಿ ಅದು 1,500 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಆ ಡೇಟಾ ಸೆಂಟರ್‌ಗಳು ಡೆರೆಕ್ಟ್‌-ಟು-ಚಿಪ್‌ ಲಿಕ್ವಿಡ್ ಕೂಲಿಂಗ್, ಅಡಿಯಾಬ್ಯಾಟಿಕ್ ಕೂಲಿಂಗ್ ಮುಂತಾದ ಆಧುನಿಕ ತಂತ್ರಜ್ಞಾನದ ಮೂಲಕ ನೀರು ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತಿವೆ ಎಂದು ಹೇಳಿದೆ.

ನೀರಿನ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಧುನಿಕ ಕೂಲಿಂಗ್ ತಂತ್ರಜ್ಞಾನಗಳನ್ನು ಕೈಗಾರಿಕೆಗಳು ಬಳಸಬೇಕು. ಅದರೊಂದಿಗೆ ನೀರನ್ನು ಉಳಿತಾಯ ಮಾಡುವ ಉದ್ದೇಶದಿಂದ ಮಳೆನೀರು ಕೊಯ್ಲು, ತ್ಯಾಜ್ಯ ನೀರಿನ ಮರುಬಳಕೆ ಮಾಡಬೇಕಿದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries