HEALTH TIPS

ಸಮನ್ವಿ ಬಜಕೂಡ್ಲುವಿಗೆ ಸ್ಕಾಲರ್ ಶಿಪ್

ಪೆರ್ಲ: ಪೆರ್ಲ ಶ್ರೀಸತ್ಯನಾರಾಯಣ ಎಎಲ್‍ಪಿ ಶಾಲೆಯ ಸಮನ್ವಿ ಬಜಕೂಡ್ಲು 2025-26ನೇ ಸಾಲಿನ ಎಲ್.ಎಸ್.ಇಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗುವುದರೊಂದಿಗೆ ಸಾಧನೆ ತೋರಿದ್ದಾಳೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಜಕೂಡ್ಲು - ಸುನೀತಾ ದಂಪತಿಗಳ ಪುತ್ರಿಯಾದ ಸಮನ್ವಿ 4ನೇ ತರಗತಿ ವಿದ್ಯಾರ್ಥಿನಿ.ಪಠ್ಯ ಚಟುವಟಿಕೆಗಳಲ್ಲದೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ನಟನೆ ಹಾಗೂ ಕ್ರೀಡಾ ರಂಗದಲ್ಲೂ ಶಾಲೆ ಮತ್ತು ಉಪಜಿಲ್ಲಾ ಮಟ್ಟದಲ್ಲೂ ಸಾಧನೆ ಮೆರೆದಿದ್ದಳು. ರಂಗಡಿಂಡಿಮ ಪೆರ್ಲ ಇದರ ಕಲಾವಿದೆಯಾಗಿರುವ ಈಕೆ ಹಲವಾರು ಕನ್ನಡ ನಾಟಕಗಳಲ್ಲೂ ಅಭಿನಯಿಸಿರುವಳು. ಈಕೆಯ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries