HEALTH TIPS

ಉಬರ್ಲೆಯಲ್ಲಿ ಕೃಷಿ ತರಬೇತಿ ಶಿಬಿರ

ಉಪ್ಪಳ: ತುಳುಸಿರಿ ಫಾರ್ಮರ್ಸ್ ಸಂಸ್ಥೆ ಮಂಜೇಶ್ವರ ಇದರ ಆಶ್ರಯದಲ್ಲಿ ಕಾಸರಗೋಡು ಸಿಪಿಸಿಆರ್.ಐ. ವಿಜ್ಞಾನಿಗಳಿಂದ ಬೇಕೂರು ಉಬರ್ಲೆ ದಾಮೋದರರವರ ಮನೆಯಲ್ಲಿ ಕೃಷಿ ತರಬೇತಿ ನಡೆಯಿತು.

ವಿಜ್ಞಾನಿಗಳಾದ ಡಾ.ಬೆಂಜಮಿನ್ ಮ್ಯಾಥ್ಯೂ ಮತ್ತು ಡಾ. ಮೌನಿಕ ಕೃಷಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ನಿರ್ವಹಣೆ, ರೋಗ ನಿರ್ವಹಣೆಗೆ ಔಷಧಿ ಸಂಪಡಣೆ ಇನ್ನಿತರ ಸಂಶಯಗಳಿಗೆ ಪರಿಹಾರೋಪಾಯ ನೀಡಿದರು. ಸಹನಿರ್ದೇಶಕ ಪ್ರಮೋದ ಕೆ.ವಿ. ಮತ್ತು ಅರ್ಜುನ್ ಸಂತೋಷ್ ಅವರು ತೋಟದಲ್ಲಿ ಮಣ್ಣು ಪರೀಕ್ಷೆ, ಅದರ ವಿವರ ಮತ್ತು ಮುಂದೆ ನೀಡಲಾಗುವ ಗೊಬ್ಬರ ಹಾಗೂ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ತುಳುಸಿರಿ ಸಂಸ್ಥೆಯ ಅಧ್ಯಕ್ಷ, ಕ್ಯಾಂಪ್ಕೋ ನಿರ್ದೇಶಕ ಸದಾನಂದ ಶೆಟ್ಟಿ ಕೊಮ್ಮಂಡ ಅಧ್ಯಕ್ಷತೆ ವಹಿಸಿದ್ದರು. ತುಳುಸಿರಿ ಸಂಸ್ಥೆಯ ಪ್ರಮೋಟರ್ ಮೀನಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ದಾಮೋದರ ಉಬರ್ಲೆ ವಂದಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries