ಬದಿಯಡ್ಕ: 31 ವರ್ಷಗಳ ಸುದೀರ್ಘ ಸೇವೆ ಮುಗಿಸಿ ನಿವೃತ್ತಿ ಹೊಂದಲಿರುವ ಸಬ್ ಇನ್ಸ್ಪೆಕ್ಟರ್ಗೆ ಬೀಳ್ಕೊಡುಗೆ ಸಮಾರಂಭವನ್ನು ಬದಿಯಡ್ಕ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಬದಿಯಡ್ಕ ಪೋಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿ.ಎಂ. ಥಾಮಸ್ ಅವರು ಮೇ 31 ರಂದು ಅಧಿಕೃತ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಭಾನುವಾರ ಹಗಲು ಬದಿಯಡ್ಕ ಪೋಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಸ್ಟೇಷನ್ ಹೌಸ್ ಆಫೀಸರ್ ಆರ್.ಪಿ. ಅನೂಪ್ ಕೃಷ್ಣ ಉದ್ಘಾಟಿಸಿ, ನಿವೃತ್ತಿ ಹೊಂದಲಿರುವ ಸಬ್ ಇನ್ಸ್ಪೆಕ್ಟರ್ ಥಾಮಸ್ ಅವರಿಗೆ ಸನ್ಮಾನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಬ್ ಇನ್ಸ್ಪೆಕ್ಟರ್ ಇ. ಸುಕುಮಾರನ್ ಸ್ವಾಗತಿಸಿದರು. ನಿವೃತ್ತ ಎಸ್.ಐ. ಫಿಲಿಪ್ ಥಾಮಸ್, ಸ್ಟೇಷನ್ ರೈಟರ್ ಪಿ. ಮನೋಜ್ ಸೇರಿದಂತೆ ಇತರ ಪೋಲೀಸ್ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಸ್.ಐ. ಸುಕುಮಾರನ್ ಅವರ ಪುತ್ರ ಆವೇದ್ ಮತ್ತು ಸಿವಿಲ್ ಪೋಲೀಸ್ ಅಧಿಕಾರಿ ಶಿಬಿನ್ ಅವರ ಪುತ್ರಿ ಶಿಖಾ ಶಾ ಅವರನ್ನು ಅಭಿನಂದಿಸಲಾಯಿತು.


.jpg)
