HEALTH TIPS

ಬೈಡನ್ ಅವಧಿಯಲ್ಲಿ ಅಮೆರಿಕ ಅವನತಿಯತ್ತ ಸಾಗಿತ್ತು: ಡೊನಾಲ್ಡ್ ಟ್ರಂಪ್

 ವಾಷಿಂಗ್ಟನ್: ಅಮೆರಿಕವು ಅವನತಿಯ ಕಡೆ ಸಾಗುತ್ತಿರುವ ದೇಶವಾಗಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿರುವುದು ಶೇಕಡಾ ನೂರರಷ್ಟು ಸತ್ಯ. ಆದರೆ, ಅದು ಜೋ ಬೈಡನ್ ಆಡಳಿತದ ನಾಲ್ಕು ವರ್ಷಗಳಲ್ಲಿ ಮಾತ್ರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ರುಥ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ. 


ಎರಡು ವರ್ಷಗಳ ಹಿಂದೆ ನಿಜವಾಗಿಯೂ ದೇಶವು ಅವನತಿಯ ಕಡೆ ಸಾಗುತ್ತಿತ್ತು. ಈ ಕುರಿತು ಚೀನಾ ಅಧ್ಯಕ್ಷರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಈಗ ಅಮೆರಿಕವು ಜಗತ್ತಿನಲ್ಲೇ ಸದೃಢ ರಾಷ್ಟ್ರವಾಗಿದೆ. ಚೀನಾದೊಂದಿಗಿನ ನಮ್ಮ ಸಂಬಂಧವು ಹಿಂದೆಂದಿಗಿಂತಲೂ ಉತ್ತಮವಾಗಿರುತ್ತದೆ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.

ತೆರೆದ ಗಡಿಗಳು, ಹೆಚ್ಚಿನ ತೆರಿಗೆ, ಲಿಂಗ ತಾರತಮ್ಯ, ಮಹಿಳಾ ಕ್ರೀಡೆಗಳಲ್ಲಿ ಪುರುಷರ ಭಾಗವಹಿಸುವಿಕೆ, ಭಯಾನಕ ವ್ಯಾಪಾರ ಒಪ್ಪಂದಗಳು, ಅತಿರೇಕದ ಅಪರಾಧಗಳಿಂದ ಅಮೆರಿಕ ಬಳಲುತಿತ್ತು ಎಂದು ಹೇಳಿದ್ದಾರೆ.

ನಮ್ಮ ಆಡಳಿತದ 16 ತಿಂಗಳಲ್ಲಿ ಅಮೆರಿಕವು ಸಾಧಿಸಿರುವ ಬೆಳವಣಿಗೆಯ ಕುರಿತು ಜಿನ್‌ಪಿಂಗ್ ಉಲ್ಲೇಖಿಸುತ್ತಿಲ್ಲ. ಈ ಅವಧಿಯಲ್ಲಿ ಅಮೆರಿಕವು ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆ ಏರಿಕೆ, ಉದ್ಯೋಗ ಸೃಷ್ಟಿ, ಯಶಸ್ವಿ ಸೇನಾ ಕಾರ್ಯಾಚರಣೆಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries