HEALTH TIPS

ಇಂಧನ ಬೆಲೆ ಏರಿಕೆ: ದೇಶವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕಾರ್ಮಿಕರ ಒಕ್ಕೂಟ

 ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಗಿಗ್ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಯನ್ನು ಖಂಡಿಸಿ ಇಂದು(ಮೇ 16) ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟ(ಜಿಐಪಿಎಸ್‌ಡಬ್ಲುಯು) ಕರೆ ನೀಡಿದೆ.‌ 


ಈ ಅವಧಿಯಲ್ಲಿ ಅಪ್ಲಿಕೇಶನ್ ಆಧಾರಿತ ಸೇವೆಗಳು ತಾತ್ಕಾಲಿಕ ಸ್ಥಗಿತಗೊಳ್ಳಲಿವೆ ಎಂದು ತಿಳಿಸಿದೆ.

ಬೇಸಿಗೆಯ ಕಾರಣದಿಂದ ದೇಶದ ಕೆಲವು ಭಾಗಗಳಲ್ಲಿ ಗಿಗ್‌ ಕಾರ್ಮಿಕರು ಈಗಾಗಲೇ ತೀವ್ರ ಶಾಖದ ನಡುವೆ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಬೆಲೆ ಏರಿಕೆಯು ನೇರ ಹೊಡೆತ ಬೀಳಲಿದೆ. ಅದರಲ್ಲೂ ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಮತ್ತು ಇತರ ಕಂಪನಿಗಳ ವಿತರಣಾ ಕಾರ್ಮಿಕರಿಗೆ ಇದು ಹೊರೆಯಾಗಲಿದೆ ಎಂದು ಗಿಗ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಸೀಮಾ ಸಿಂಗ್ ಹೇಳಿದ್ದಾರೆ.

ಇಂಧನ ಬೆಲೆ ಏರಿಕೆಯಿಂದಾಗಿ ಗಿಗ್ ಕಾರ್ಮಿಕರಿಗೆ ತೊಂದರೆ ಉಂಟಾಗಿದ್ದು, ಸರ್ಕಾರ ಮತ್ತು ಕಂಪನಿಗಳು ಪ್ರತಿ ಕಿಲೋಮೀಟರ್‌ಗೆ ₹20 ಕನಿಷ್ಠ ಸೇವಾ ದರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೈನಂದಿನ ಗಳಿಕೆಗಾಗಿ ಮೋಟಾರ್‌ಬೈಕ್ ಮತ್ತು ಸ್ಕೂಟರ್‌ಗಳನ್ನು ಅವಲಂಬಿಸಿರುವ ಸುಮಾರು 1.2 ಕೋಟಿ ಗಿಗ್ ಕಾರ್ಮಿಕರು ಇಂಧನ ಬೆಲೆ ಏರಿಕೆಯಿಂದಾಗಿ ನಷ್ಟ ಅನುಭವಿಸಲಿದ್ದಾರೆ. ಅವರ ಆದಾಯ ಕಡಿಮೆಯಾಗಲಿದೆ. ತಕ್ಷಣವೇ ಭಾರತ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಗಿಗ್ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಸಂಯೋಜಕ ನಿರ್ಮಲ್ ಗೋರಾನಾ ತಿಳಿಸಿದ್ದಾರೆ.

ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟದಲ್ಲಿ ಜೊಮಾಟೊ, ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೊ, ಡಂಜೊ, ಅರ್ಬನ್ ಕಂಪನಿ, ಓಲಾ, ಉಬರ್, ರಾಪಿಡೊ, ಪೋರ್ಟರ್, ಅಮೆಜಾನ್ ಫ್ಲೆಕ್ಸ್, ಇನ್‌ಸ್ಟಾಮಾರ್ಟ್ ಸೇರಿದಂತೆ ಹಲವು ಕಂಪನಿಗಳಿಗೆ ಸೇರಿದ ಗಿಗ್ ಕಾರ್ಮಿಕರಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ ತಲಾ ₹3 ಹೆಚ್ಚಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries