HEALTH TIPS

ಮಿತವ್ಯಯಕ್ಕೆ ಮೋದಿ ಕರೆ; ಯಾವ ಸರ್ಕಾರಗಳು ಏನೆಲ್ಲಾ ಕ್ರಮಕೈಗೊಂಡಿವೆ ಗೊತ್ತಾ ?

 ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ಹಲವು ಕಾರಣಗಳಿಂದಾಗಿ ಇಂಧನ ಬೆಲೆ ಏರಿಕೆಯಾಗಿದ್ದು, ತೈಲ ಕೊರತೆ ಉಂಟಾಗುವ ಸಾಧ್ಯತೆ ಕೂಡ ಇದೆ. ಅದರಲ್ಲೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯದ ಸೂತ್ರ ನೀಡಿದ ಬಳಿಕ ಕೇಂದ್ರ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ಈ ಕುರಿತು ಕ್ರಮ ಕೈಗೊಂಡಿವೆ. 


ಕೇಂದ್ರ ಸರ್ಕಾರದ ಕ್ರಮಗಳು:

ಪ್ರಧಾನಿ ಬೆಂಗಾವಲು ಪಡೆ ಕಡಿತ: ಪ್ರಧಾನಮಂತ್ರಿಯವರ ಅಧಿಕೃತ ಎಸ್‌ಪಿಜಿ ಮೋಟಾರ್‌ಕೇಡ್ (ಬೆಂಗಾವಲು ವಾಹನಗಳ ಸಂಖ್ಯೆ) ಅನ್ನು ಶೇ. 50 ರಷ್ಟು ಕಡಿತಗೊಳಿಸಲಾಗಿದೆ.

ಇವಿ ವಾಹನಗಳ ಸೇರ್ಪಡೆ: ದಿನನಿತ್ಯದ, ಅಲ್ಪಾವಧಿಯ ಕೇಂದ್ರ ಸರ್ಕಾರದ ಕಾರ್ಯಾಚರಣೆಗಳಿಗಾಗಿ ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ತಕ್ಷಣವೇ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ.

ವಿಐಪಿ ಬೆಂಗಾವಲು ಪಡೆ ಕಡಿತ: ಉನ್ನತ ದರ್ಜೆಯ ಕೇಂದ್ರ ಸಚಿವ ಸಂಪುಟದ ಸಚಿವರ ಭದ್ರತಾ ಬೆಂಗಾವಲು ವಾಹನಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತ.

ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಂಡಿರುವ ಕ್ರಮ:

ದೆಹಲಿ -

ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್): ಅತ್ಯಗತ್ಯವಲ್ಲದ ಇಲಾಖೆಗಳ ಸಿಬ್ಬಂದಿಗೆ ಪ್ರತಿ ವಾರ ಕಡ್ಡಾಯವಾಗಿ ಎರಡು ದಿನಗಳ ಮನೆಯಿಂದಲೇ ಕೆಲಸ ಮಾಡುವ ವೇಳಾಪಟ್ಟಿಯನ್ನು ಜಾರಿಗೊಳಿಸಿದೆ.

ಮೆಟ್ರೊ ಬಳಕೆ: ಎಲ್ಲಾ ಕೇಂದ್ರ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೋಮವಾರದಂದು ಸಾರ್ವಜನಿಕ ಮೆಟ್ರೊ ಮಾರ್ಗಗಳನ್ನು ಬಳಸಬೇಕು ಅಥವಾ ಕಾರ್‌ಪೂಲ್ ಮಾಡಬೇಕು ಎಂದು ಕಡ್ಡಾಯಗೊಳಿಸಿದೆ.

ಎಸಿ ತಾಪಮಾನ ನಿಯಂತ್ರಣ: ಎಲ್ಲಾ ಸರ್ಕಾರಿ ಕಚೇರಿಗಳ ಹವಾನಿಯಂತ್ರಣ (ಎಸಿ) ಘಟಕಗಳಲ್ಲಿ ತಾಪಮಾನವನ್ನು ಕಡ್ಡಾಯವಾಗಿ 24ಲಿಅ ನಿಂದ 26ಲಿಅ ನಡುವೆ ಇರುವಂತೆ ನಿಯಂತ್ರಣ ಮಾಡುವುದು.

ವರ್ಚುವಲ್ ಕಾರ್ಯಕ್ರಮಗಳು: ವೇದಿಕೆಗಳ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ, ಮೂರು ತಿಂಗಳ ಅವಧಿಗೆ ಅವುಗಳನ್ನು ಡಿಜಿಟಲ್ ವೇದಿಕೆಗಳಿಗೆ ಸ್ಥಳಾಂತರಿಸುವುದು.

ಜಮ್ಮು ಮತ್ತು ಕಾಶ್ಮೀರ -

ಬೆಂಗಾವಲು ಪಡೆ ಕಡಿತ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇಂಧನ ಉಳಿಸುವ ಸಲುವಾಗಿ ತಮ್ಮ ಅಧಿಕೃತ ಭದ್ರತಾ ಬೆಂಗಾವಲು ಪಡೆಯನ್ನು ಸ್ವಯಂಪ್ರೇರಿತರಾಗಿ ಕಡಿತಗೊಳಿಸಿದ್ದಾರೆ.

ರಾಜ್ಯವಾರು ಕ್ರಮಗಳು:

ಉತ್ತರ ಪ್ರದೇಶ: ವಿಐಪಿ ವಾಹನಗಳ ಕಡಿತ, ಖಾಸಗಿ ಕಚೇರಿಗಳು ಮತ್ತು ಅತ್ಯಗತ್ಯವಲ್ಲದ ಸಾರ್ವಜನಿಕ ಇಲಾಖೆಗಳಲ್ಲಿ ಕಡ್ಡಾಯ ಮನೆಯಿಂದಲೇ ಕೆಲಸ, ವರ್ಚುವಲ್ ಆಡಳಿತ

ಗುಜರಾತ್: ವಾಹನಗಳ ಕಡಿತ, ವರ್ಚುವಲ್ ಆಡಳಿತ, ಸರ್ಕಾರದ ಅಧಿಕೃತ ಪ್ರವಾಸಗಳ ರದ್ದು.

ಬಿಹಾರ: ಇವಿ ವಾಹನಗಳ ಬಳಕೆ, ಬೆಂಗಾವಲು ವಾಹನಗಳ ಕಡಿತ

ಮಹಾರಾಷ್ಟ್ರ: ಆಡಳಿತಾತ್ಮಕ ಉದ್ದೇಶದ ವಿಮಾನ ಪ್ರಯಾಣ ನಿಷೇಧ, ಅಧಿಕಾರಿಗಳು ಮತ್ತು ಸಚಿವರಿಗೆ ಸಾರ್ವಜನಿಕ ಸಾರಿಗೆ ಬಳಕೆ ಕಡ್ಡಾಯ, ಬೆಂಗಾವಲು ವಾಹನಗಳ ಕಡಿತ.

ಮಧ್ಯಪ್ರದೇಶ: ಬೆಂಗಾವಲು ವಾಹನಗಳ ಕಡಿತ, ರಾಜಕೀಯ ರೋಡ್ ಶೋ ನಿಷೇಧ,

ರಾಜಸ್ಥಾನ: ಬೆಂಗಾವಲು ವಾಹನಗಳ ಕಡಿತ, ಇಂಧನ ವೆಚ್ಚ ಕಡಿತ

ಸಿಕ್ಕಿಂ: ಆಡಳಿತಾತ್ಮಕ ವಾಹನಗಳ ಖರೀದಿ ಕಡಿತ, ಇಂಧನ ವೆಚ್ಚ ಕಡಿತ, ಸಂಚಾರ ನಿಯಂತ್ರಣ

ತ್ರಿಪುರ: ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸರ್ಕಾರಿ ನೌಕರರಿಗೆ ಸರದಿ ಆಧಾರದಲ್ಲಿ ಮನೆಯಿಂದಲೇ ಕೆಲಸ

ಯಾವುದೇ ಕ್ರಮಗಳನ್ನು ಕೈಗೊಳ್ಳದ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries