HEALTH TIPS

ಗಾಜಾ ಮೇಲಿನ ದಾಳಿಯಲ್ಲಿ ಹಮಾಸ್ ನೂತನ ಮುಖ್ಯಸ್ಥನ ಹತ್ಯೆ: ಇಸ್ರೇಲ್

 ಜೆರುಸಲೇಮ್: ಗಾಜಾ ಮೇಲಿನ ದಾಳಿಯಲ್ಲಿ ಹಮಾಸ್ ಶಸ್ತ್ರಾಸ್ತ ಪಡೆಯ ನೂತನ ಮುಖ್ಯಸ್ಥ ಮೊಹಮ್ಮದ್ ಓಡೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.


'ಹಮಾಸ್ ಭಯೋತ್ಪಾದಕ ಸಂಘಟನೆಯ ಸಶಸ್ತ್ರ ವಿಭಾಗದ ಕಮಾಂಡರ್ ಅನ್ನು ನಾವು ಹತ್ಯೆ ಮಾಡಿದ್ದೇವೆ. ನರಕದಲ್ಲಿರುವ ಅವರ ಜೊತೆಗಾರರನ್ನು ಭೇಟಿಯಾಗಲು ಕಳುಹಿಸಿಕೊಟ್ಟಿದ್ದೇವೆ' ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿದ ಐಡಿಎಫ್‌ ಮತ್ತು ಶಿನ್ ಬೆಟ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

'ಅ. 7ರ ಹತ್ಯಾಕಾಂಡಕ್ಕೆ ಕಾರಣವಾಗಿರುವ ಯಾರೊಬ್ಬರನ್ನೂ ನಾವು ಜೀವಂತವಾಗಿ ಉಳಿಸುವುದಿಲ್ಲ ಎನ್ನುವುದಕ್ಕೆ ನಾವು ಬದ್ಧವಾಗಿದ್ದೇವೆ. ಅದನ್ನೆ ಕಾರ್ಯರೂಪಕ್ಕೆ ತರುತ್ತಿದ್ದೇವೆ. ಅವರು ಯಾರೇ ಆಗಿದ್ದರೂ, ಅವರ ಸಾವು ನಿಶ್ಚಿತ' ಎಂದು ಹೇಳಿದ್ದಾರೆ.

ಮೇ 15ರಂದು ಇಸ್ರೇಲ್‌, ಎಜ್ಜೆದಿನ್ ಅಲ್-ಹದ್ದಾದ್ ಹತ್ಯೆ ಮಾಡಿದ ನಂತರ ಓಡೆ ಅನ್ನು ಹಮಾಸ್‌ನ ನೂತನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. 2023ರ ಅ. 7ರ ಹತ್ಯಾಕಾಂಡ ಪ್ರಮುಖ ರೂವಾರಿಯಾಗಿದ್ದ ಓಡೆ, ಇಸ್ರೇಲ್‌ ಮೇಲಿನ ಹಲವು ದಾಳಿಗಳಲ್ಲಿ ಕೂಡ ಪ್ರಮುಖ ಪಾತ್ರವಹಿಸಿದ್ದರು.

ಓಡೆ ಹತ್ಯೆ ಕುರಿತು ಹಮಾಸ್, ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries