HEALTH TIPS

ಸಂವರ್ಧಿತ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಸಾಗಿಸುವ ಪ್ರಶ್ನೆಯೇ ಇಲ್ಲ: ಮೊಜ್ತಬಾ ಖಾಮಿನೈ

ಟೆಹರಾನ್: ದೇಶದಲ್ಲಿರುವ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಸಾಗಿಸುವ ಪ್ರಶ್ನೆಯೇ ಇಲ್ಲ ಎಂದು ಇರಾನ್‍ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಹೇಳಿದ್ದು, ಅಮೆರಿಕದ ಮುಖ್ಯ ಷರತ್ತನ್ನು ತಿರಸ್ಕರಿಸಿದ್ದಾರೆ.

ಇರಾನ್‍ನ ಬಳಿಯಿರುವ 400 ಕಿ.ಗ್ರಾಂಗಿಂತಲೂ ಹೆಚ್ಚು ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು, ಇರಾನ್ ತನ್ನ ಕಾರ್ಯಾಚರಣೆಯನ್ನು ಒಂದೇ ಪರಮಾಣು ಸ್ಥಾವರಕ್ಕೆ ಸೀಮಿತಗೊಳಿಸಬೇಕು ಮತ್ತು ಯುದ್ಧ ಸಂಬಂಧಿತ ಹಾನಿಗೆ ಅಮೆರಿಕ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ಕೈ ಬಿಡಬೇಕು ಎಂದು ಅಮೆರಿಕ ಆಗ್ರಹಿಸಿತ್ತು ಎಂದು ಇರಾನ್‍ನ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

`ಈ ಷರತ್ತುಗಳಿಗೆ ಪ್ರತಿಯಾಗಿ ಸರ್ವೋಚ್ಛ ನಾಯಕರ ನಿರ್ದೇಶನ ಮತ್ತು ಸ್ಥಾಪನೆಯೊಳಗಿನ ಒಮ್ಮತದ ನಿರ್ಧಾರದಂತೆ ಯುರೇನಿಯಂ ದಾಸ್ತಾನು ದೇಶದಿಂದ ಹೊರಗೆ ಹೋಗುವುದಿಲ್ಲ ಎಂದು ಇರಾನ್ ಸರಕಾರದ ಮೂಲಗಳು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ತನ್ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಹಸ್ತಾಂತರಿಸಲು ಇರಾನ್ ಒಪ್ಪಿದೆ ಮತ್ತು ಎರಡೂ ಕಡೆಯವರು ಒಪ್ಪಂದಕ್ಕೆ ಅತೀ ಸನಿಹದಲ್ಲಿದ್ದಾರೆ ಎಂದು ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇರಾನ್‍ನ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಇರಾನ್‍ನಿಂದ ಹೊರಗೆ ಸಾಗಿಸಲಾಗುವುದು ಮತ್ತು ಯಾವುದೇ ಒಪ್ಪಂದವು ಈ ಕುರಿತ ಅಂಶವನ್ನು ಒಳಗೊಂಡಿರುತ್ತದೆ ಎಂದು ಟ್ರಂಪ್ ಭರವಸೆ ನೀಡಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದರು.

ಇರಾನ್ ಜೊತೆಗಿನ ಮಾತುಕತೆ ಚೂರಿಯ ಅಲಗಿನ ಮೇಲೆ ನಿಂತಿದೆ: ಟ್ರಂಪ್

ಇರಾನ್ ಜೊತೆಗಿನ ಮಾತುಕತೆ ಚೂರಿಯ ಅಲಗಿನ ಮೇಲೆ ನಿಂತಿದೆ. ಶಾಂತಿ ಒಪ್ಪಂದ ಅಥವಾ ಅಮೆರಿಕದ ಹೊಸ ದಾಳಿಯನ್ನು ಎದುರಿಸುವುದು ಎಂಬ ಪರಿಸ್ಥಿತಿ ಇರಾನ್‍ಗೆ ಎದುರಾಗಿದೆ. ಇರಾನ್‍ನ ಪ್ರತಿಕ್ರಿಯೆಗೆ ನಾವು ಇನ್ನೂ ಕೆಲ ಸಮಯ ಕಾಯಲು ಸಿದ್ಧವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಜೊತೆಗಿನ ಸಂಭಾವ್ಯ ಮಾತುಕತೆಯ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ `ಅದು ಗಡಿರೇಖೆಯ ಅಂಚಿನಲ್ಲಿದೆ. ನಾವು ಸರಿಯಾದ ಉತ್ತರವನ್ನು ಪಡೆಯದಿದ್ದರೆ ನಾವು ಮುಂದುವರಿಯಲು ಸಿದ್ಧರಿದ್ದೇವೆ. ನಾವು ಸರಿಯಾದ ಉತ್ತರವನ್ನು ಪಡೆಯಬೇಕಿದೆ. ಸಂಪೂರ್ಣ 100% ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ. ಒಪ್ಪಂದವು ಬಹಳಷ್ಟು ಸಮಯ, ಶಕ್ತಿ ಮತ್ತು ಜೀವಗಳನ್ನು ಉಳಿಸುತ್ತದೆ ಮತ್ತು ಅತ್ಯಂತ ತ್ವರಿತವಾಗಿ, ಕೆಲವೇ ದಿನಗಳಲ್ಲಿ ತಲುಪಬಹುದು' ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries