HEALTH TIPS

ಸೈಬರ್ ವಂಚನೆ | ಅಮೆರಿಕದ ಹಿರಿಯ ನಾಗರಿಕರಿಂದ ಲಕ್ಷಾಂತರ ಡಾಲರ್ ದೋಚಿದ ಭಾರತದ ಕಾಲ್‌ಸೆಂಟರ್

ವಾಷಿಂಗ್ಟನ್: ಸೈಬರ್ ವಂಚನೆಯ ಮೂಲಕ ಅಮೆರಿಕದ ನೂರಾರು ಹಿರಿಯ ನಾಗರಿಕರಿಂದ ಲಕ್ಷಾಂತರ ಡಾಲರ್ ದೋಚಿದೆಯೆನ್ನಲಾದ ಭಾರತದಿಂದ ಕಾರ್ಯಾಚರಿಸುತ್ತಿದ್ದ ಕಾಲ್ ಸೆಂಟರ್ ಒಂದನ್ನು ಮುಚ್ಚುಗಡೆಗೊಳಿಸಿರುವುದಾಗಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ತಿಳಿಸಿದೆ.

ಹಗರಣಕ್ಕೆ ಸಂಬಂಧಿಸಿ ಕಾಲ್‌ಸೆಂಟರ್‌ನ ಇಬ್ಬರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳಾದ ಫ್ಲೋರಿಡಾ ನಿವಾಸಿ ಆಯಡಮ್ ಯಂಗ್ ಹಾಗೂ ಲಾಸ್‌ವೆಗಾಸ್ ನಿವಾಸಿ ಹ್ಯಾರಿಸನ್ ಗೆವಿರ್‌ಟ್ಝ್ ಎಂಬವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ತಮ್ಮ ಸಂಸ್ಥೆಯಲ್ಲಿ ನಡೆಯುತ್ತಿದ್ದ ಸೈಬರ್ ಆಕ್ರಮಗಳ ಬಗ್ಗೆ ತಾವು ಕುರುಡುಗಣ್ಣಿನಿಂದ ವರ್ತಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಕಾಲ್‌ಸೆಂಟರ್ ದೂರವಾಣಿ ಸಂಖ್ಯೆಗಳು, ಕಾಲ್ ರೂಟಿಂಗ್ ಸೇವೆಗಳು, ಕಾಲ್ ಟ್ರ್ಯಾಕಿಂಗ್ ಹಾಗೂ ಕಾಲ್ ಫಾರ್ವರ್ಡಿಂಗ್ ಸೇವೆಗಳನ್ನು ಒದಗಿಸುತ್ತಿದ್ದವು.

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಈ ಕಾಲ್‌ಸೆಂಟರ್, ಬಳಕೆದಾರರಿಗೆ ಅವರ ಕಂಪ್ಯೂಟರ್ ವೈರಸ್ ಅಥವಾ ಮಾಲ್‌ವೇರ್‌ನಿಂದ ಪೀಡಿತವಾಗಿದೆ ಎಂಬ ಹುಸಿ 'ಪಾಪ್‌ಅಪ್' ಸಂದೇಶಗಳನ್ನು ಕಳುಹಿಸುತ್ತಿತ್ತು.ಅಲ್ಲದೆ ಸಂದೇಶದಲ್ಲಿ ತೋರಿಸಲಾದ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗುತ್ತಿತ್ತು. ಸಂತ್ರಸ್ತರು ಈ ದೂರವಾಣಿ ಮೂಲಕ ಕಾಲ್‌ಸೆಂಟರ್ ಅನ್ನು ಸಂಪರ್ಕಿಸಿದಾಗ ತಾಂತ್ರಿಕ ನೆರವಿನ ಸೇವೆಯನ್ನು ನೀಡುವ ಸೋಗಿನಲ್ಲಿ ನೂರಾರು ಡಾಲರ್‌ಗಳನ್ನು ಪಾವತಿಸುವಂತೆ ಮಾಡಲಾಗುತ್ತಿತ್ತು ಎಂದು ಎಫ್‌ಬಿಐ ತಿಳಿಸಿದೆ.

ಇನ್ನು ಕೆಲವು ಪ್ರಕರಣಗಳಲ್ಲಿ ಈ ಕಾಲ್‌ಸೆಂಟರ್‌ನ ಏಜೆಂಟರು, ಸಂತ್ರಸ್ತರ ಕಂಪ್ಯೂಟರ್‌ಗಳಿಂದ ಅವರ ಖಾಸಗಿ ಹಾಗೂ ಹಣಕಾಸು ಮಾಹಿತಿಯನ್ನು ಕದಿಯುತ್ತಿದ್ದರೆಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಪ್ರಜೆಗಳಾದ ಸಾಹಿಲ್ ನಾರಂಗ್, ಚಿರಾಗ್ ಸಚ್‌ದೇವ, ಅಬ್ರಾರ್ ಅಂಜುಮ್ ಹಾಗೂ ಮನೀಶ್ ಕುಮಾರ್ ಅವರಿಗೆ ಭಾರತದ ಕಾಲ್‌ಸೆಂಟರ್‌ನಿಂದ ಟೆಲಿ ಮಾರ್ಕೆಟಿಂಗ್ ವಂಚನೆಯ ಸ್ಕೀಮ್ ನಡೆಸುತ್ತಿದ್ದ ಆರೋಪವನ್ನು ಹೊರಿಸಲಾಗಿದೆ.

ಈ ಪ್ರಕರಣದಲ್ಲಿ ಜಗಮೀತ್ ಸಿಂಗ್ ವಿರ್ಕ್ ಎಂಬ ಇನ್ನೋರ್ವ ಭಾರತೀಯನನ್ನು ಬಂಧಿಸಲಾಗಿದೆ. ಆದರೆ ಈ ಹಗರಣದಲ್ಲಿ ಆತನ ಪಾತ್ರವೇನೆಂಬುದನ್ನು ಬಹಿರಂಗಪಡಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries