ವಾಷಿಂಗ್ಟನ್: ಕೊನೆಯ ಕ್ಷಣದ ಮಾತುಕತೆಗಳಿಂದ ಶಾಂತಿ ಒಪ್ಪಂದ ವಿಫಲವಾದರೆ ಇರಾನ್ ವಿರುದ್ಧ ಹೊಸ ದಾಳಿಗಳನ್ನು ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಗಂಭೀರವಾಗಿ ಪರಿಗಣಿಸುತ್ತಿದ್ದಾರೆ" ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ಂxios ವರದಿ ಮಾಡಿದೆ.
ಇರಾನ್ ಜೊತೆಗಿನ ಯುದ್ಧದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ್ದಾರೆ.
ಕೊನೆಯ ಕ್ಷಣದ ಶಾಂತಿ ಒಪ್ಪಂದಕ್ಕೆ ಪ್ರಯತ್ನಿಸುವ ಉದ್ದೇಶದಿಂದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕೈ ಪ್ರತಿಕ್ರಿಯಿಸಿ, ಈ ಭೇಟಿಯು ನಾವು ಮಹತ್ವದ ತಿರುವು ಅಥವಾ ನಿರ್ಣಾಯಕ ಹಂತ ತಲುಪಿದ್ದೇವೆ ಎಂಬುದನ್ನು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

