HEALTH TIPS

ಹಾರ್ವರ್ಡ್ ನಿಧಿ ಹೂಡಿಕೆ ವ್ಯವಸ್ಥೆ ಮರುರೂಪಿಸಿದ ನಿರ್ಮಲ್ ನರ್ವೇಕರ್ ನಿವೃತ್ತಿಗೆ ಸಜ್ಜು

 ವಾಷಿಂಗ್ಟನ್: ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ 57 ಶತಕೋಟಿ ಡಾಲರ್ ದತ್ತಿನಿಧಿಯ ಹೂಡಿಕೆ ವ್ಯವಸ್ಥೆಯನ್ನು ಒಂದು ದಶಕದಿಂದಲೂ ನಿರ್ವಹಿಸಿಕೊಂಡು ಬಂದ ಭಾರತ ಮೂಲದ ಹಣಕಾಸು ತಜ್ಞ ನಿರ್ಮಲ್ ನರ್ವೇಕರ್ ನಿವೃತ್ತಿಗೆ ಸಜ್ಜಾಗುತ್ತಿದ್ದಾರೆ.


ವಾಲ್‍ಸ್ಟ್ರೀಟ್ ಹಾಗೂ ಇವಿ ಲೀಗ್ ವಲಯದಲ್ಲಿ 'ನರ್ವ್' ಎಂದೇ ಕರೆಸಿಕೊಂಡಿರುವ ನರ್ವೇಕರ್ 2027ರಲ್ಲಿ ನಿವೃತ್ತಿಯಾಗುವುದಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಉತ್ತರಾಧಿಕಾರತ್ವ ಯೋಜನೆಗೆ ಸಜ್ಜಾಗುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶ್ವದಲ್ಲೇ ಅತಿದೊಡ್ಡ ವಿಶ್ವವಿದ್ಯಾನಿಲಯ ನಿಧಿ ಎನಿಸಿರುವ ಮತ್ತು ಭಾರತದ ಒಟ್ಟು ಶಿಕ್ಷಣ ಬಜೆಟ್‍ ಗಾತ್ರಕ್ಕಿಂತಲೂ ಅಧಿಕ ಎನಿಸಿದ 57 ಶತಕೋಟಿ ಡಾಲರ್ ನಿಧಿ, ಟ್ರಂಪ್ ಆಡಳಿತ ಫೆಡರಲ್ ನೆರವನ್ನು ಕಡಿತಗೊಳಿಸಿದ ಬಳಿಕ ಅಮೆರಿಕದಲ್ಲಿ ರಾಜಕೀಯ ಹಾಗೂ ವಿತ್ತೀಯ ಬಿರುಗಾಳಿಯನ್ನೇ ಸೃಷ್ಟಿಸಿತ್ತು.

ಈ ಬೃಹತ್ ನಿಧಿ ವಿಶ್ವದ ಬಹುತೇಕ ದೇಶಗಳ ಇಡೀ ವಿಶ್ವವಿದ್ಯಾನಿಲಯ ವ್ಯವಸ್ಥೆಯ ಮತ್ತು ಶಿಕ್ಷಣ ಬಜೆಟ್‍ಗಿಂತ ದೊಡ್ಡದು. ಅಮೆರಿಕದಲ್ಲಿ ಈ ದತ್ತಿನಿಧಿ ಶಾಶ್ವತ ಹೂಡಿಕೆಯ ಸಾಧನವಾಗಿದ್ದು, ಇದರಿಂದ ಬಂದ ವಾರ್ಷಿಕ ಗಳಿಕೆಯ ಒಂದು ಪಾಲನ್ನು ಮಾತ್ರ ವಿಶ್ವವಿದ್ಯಾನಿಲಯ ವೆಚ್ಚ ಮಾಡುತ್ತದೆ ಹಾಗೂ ಮೂಲಮೊತ್ತವನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸುತ್ತದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries