ಟೆಹರಾನ್ (AFP): ಕೊಲ್ಲಿ ಭಾಗದಲ್ಲಿ ಅಮೆರಿಕ ನೌಕಾಪಡೆಗಳು ನಡೆಸಿದ ದಾಳಿ ಬೆನ್ನಲ್ಲೇ, ರಾಜತಾಂತ್ರಿಕತೆಯ ಗಂಭೀರತೆಯನ್ನು ಇರಾನ್ ಪ್ರಶ್ನಿಸಿದೆ. ಅಮೆರಿಕ ಮುಂದಿಟ್ಟಿರುವ ಹೊಸ ಮಾತುಕತೆಯ ಪ್ರತಿಕ್ರಿಯೆಗಾಗಿ ಕಾಯಬೇಕಾಗುತ್ತದೆ ಎಂದು ತಿಳಿಸಿದೆ.
ವಾಷಿಂಗ್ಟನ್ ಮುಂದಿಟ್ಟಿರುವ ಹೊಸ ಪ್ರಸ್ತಾವದ ಕುರಿತು ಇರಾನ್‌ನಿಂದ ಶುಕ್ರವಾರ ರಾತ್ರಿಯೇ ಉತ್ತರ ನಿರೀಕ್ಷಿಸುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು.
ಆದರೆ, ಪಾಕಿಸ್ತಾನ ಮಧ್ಯವರ್ತಿಗಳಿಗೆ ಸಂದೇಶ ಕಳುಹಿಸಿದರೂ ಆ ಬಗ್ಗೆ ಯಾವುದೇ ಸಾರ್ವಜನಿಕರ ಸೂಚನೆ ಇರಲಿಲ್ಲ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಟರ್ಕಿಯ ವಿದೇಶಾಂಗ ಸಚಿವ ಹಕಾದ್ ಫಿದಾನ್ ಜೊತೆಗಿನ ಮಾತುಕತೆ ವೇಳೆ ಅಮೆರಿಕದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದಾರೆ.
'ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಪಡೆಗಳು ನಡೆಸಿರುವ ಸಂಘರ್ಷ, ನಿರಂತರ ಕದನ ವಿರಾಮ ಉಲ್ಲಂಘನೆಯಿಂದ ರಾಜತಾಂತ್ರಿಕ ಮಾರ್ಗದ ಕುರಿತಂತೆ ಅಮೆರಿಕ ಹೊಂದಿರುವ ಉದ್ದೇಶ ಹಾಗೂ ಗಂಭೀರತೆಯ ಕುರಿತು ಅನುಮಾನ ಮೂಡಿಸಿದೆ' ಎಂದು ಅರಾಘ್ಚಿ ತಿಳಿಸಿದ್ದಾರೆ ಎಂದು 'ಐಎಸ್‌ಎನ್‌ಎ' ಸುದ್ದಿಸಂಸ್ಥೆ ವರದಿ ಮಾಡಿದೆ.

