HEALTH TIPS

ರಾತ್ರಿ ಹೊತ್ತು ಮಾವಿನ ಹಣ್ಣು ತಿನ್ನಬಹುದೇ? ಮಾವು ತಿನ್ನಬಹುದಾದ ಸರಿಯಾದ ಸಮಯ ಯಾವುದು?

ಬೇಸಿಗೆ ಅಂದರೆ ಹೇಳಿ ಕೇಳಿ ಮಾವಿನ ಋತು. ಮಾರುಕಟ್ಟೆ ತುಂಬಾ ರುಚಿಕರವಾದ ಮಾವಿನ ಹಣ್ಣುಗಳಿಂದ ತುಂಬಿ ಹೋಗಿವೆ. ಮಾವಿನ ಹಣ್ಣು ಹೆಚ್ಚು ರಸಭರಿತವಾಗಿದ್ದಷ್ಟೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ನಿಯಮಿತವಾಗಿ ಈ ಹಣ್ಣನ್ನು ಸೇವಿಸಿದರೆ, ಅದು ನಿಮ್ಮ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಆದರೂ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಇನ್ನು ರಾತ್ರಿ ಹೊತ್ತು ಮಾವು ತಿನ್ನಬಹುದೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹೀಗಿರುವಾಗ ರಾತ್ರಿ ವೇಳೆ ಮಾವು ತಿನ್ನಬಹುದೇ ಅಥವಾ ಇಲ್ಲವೇ ಅಥವಾ ಮಾವು ತಿನ್ನಲು ಸರಿಯಾದ ಸಮಯ ಯಾವುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾತ್ರಿ ಮಾವಿನ ಹಣ್ಣು ತಿನ್ನಬಹುದೇ?:

ರಾತ್ರಿಯಲ್ಲಿ ಮಾವಿನ ಹಣ್ಣು ತಿನ್ನಲೇ ಬಾರದು ಎನ್ನುವ ನಿಯಮವೇನಿಲ್ಲ. ಆದರೆ ಅದನ್ನು ರಾತ್ರಿ ವೇಳೆ ಮಿತವಾಗಿ ಸೇವಿಸಬೇಕು ಎನ್ನುತ್ತಾರೆ ಆಹಾರ ತಜ್ಞರು. ಮಾವಿನ ಹಣ್ಣುಗಳಲ್ಲಿ ಇತರ ಹಣ್ಣುಗಳಿಗಿಂತ ಹೆಚ್ಚಿನ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿಗಳಿವೆ. ಆದ್ದರಿಂದ, ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ತಿಂದು ತಕ್ಷಣವೇ ಮಲಗಿದರೆ ಸಕ್ಕರೆ ಮಟ್ಟ ವಿಪರೀತವಾಗಿ ಹೆಚ್ಚಾಗಬಹುದು. ಇನ್ನು ಗ್ಯಾಸ್, ಆಸಿಡಿಟಿ ಸಮಸ್ಯೆ ಇದ್ದರೆ ಆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

ರಾತ್ರಿಯಲ್ಲಿ ಮಾವಿನ ಹಣ್ಣು ಯಾಕೆ ತಿನ್ನಬಾರದು:

ಮಧುಮೇಹ, ತೂಕ ಹೆಚ್ಚಳ, ಜೀರ್ಣಕ್ರಿಯೆ ಸಮಸ್ಯೆ ಇರುವವರು ರಾತ್ರಿ ವೇಳೆ ಮಾವಿನಹಣ್ಣು ತಿನ್ನಬಾರದು. ಇದಲ್ಲದೆ, ಪದೇ ಪದೇ ಆಸಿಡಿಟಿ, ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುತ್ತಿದ್ದರೆ , ಸಂಜೆ ಮೇಲೆ ಮಾವಿನಹಣ್ಣು ತಿನ್ನುವುದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದು.

ಮಾವು ತಿನ್ನಲು ಸರಿಯಾದ ಸಮಯ ಯಾವುದು?:

ಮಾವಿನ ಹಣ್ಣುಗಳನ್ನು ತಿನ್ನುವುದು ನಿಮಗೆ ಇಷ್ಟ ಎಂದಾದರೆ ಅವುಗಳನ್ನು ಬೆಳಗಿನ ಉಪಾಹಾರದೊಂದಿಗೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಮಾತ್ರ ತಿನ್ನಿ. ಬೆಳಿಗ್ಗೆ ಅಥವಾ ಮಧ್ಯಾಹ್ನ ಮಾವಿನ ಹಣ್ಣು ತಿನ್ನಲು ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಾವಿನ ಹಣ್ಣುಗಳನ್ನು ಸೇವಿಸುವುದರಿಂದ ಹೆಚ್ಚು ಸಕ್ರಿಯರಾಗಿರಲು ಸಹಾಯ ಮಾಡುತ್ತದೆ. ಮಾವಿನ ಹಣ್ಣಿನಲ್ಲಿರುವ ಸಕ್ಕರೆಯನ್ನು ಶಕ್ತಿಯಾಗಿ ಬಳಸಲು ಸಾಧ್ಯವಾಗುತ್ತದೆ. ವ್ಯಾಯಾಮದ ನಂತರ ಮಾವಿನ ಹಣ್ಣು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ತ್ವರಿತ ಶಕ್ತಿಯನ್ನು ನೀಡುತ್ತದೆ.

ರಾತ್ರಿ ಮಾವಿನಹಣ್ಣು ತಿನ್ನಲೇಬೇಕು ಎಂದಾದರೆ ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ಅವುಗಳನ್ನು ತಿನ್ನಲು ಪ್ರಯತ್ನಿಸಿ. ಒಂದು ಬಾರಿಗೆ ಒಂದು ಸಣ್ಣ ಬಟ್ಟಲು ಅಥವಾ ಒಂದು ಮಧ್ಯಮ ಗಾತ್ರದ ಮಾವಿನಹಣ್ಣು ಮಾತ್ರ ತಿಂದರೆ ಸಾಕು. ಕ್ಯಾಲೋರಿಗಳು ಹೆಚ್ಚಾಗದಂತೆ ಹಾಲು, ಐಸ್ ಕ್ರೀಮ್ ಅಥವಾ ಅದರೊಂದಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ.

ಮಾವಿನಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನಸಿಡುವುದನ್ನು ಮರೆಯಬೇಡಿ:

ಅನೇಕ ಜನರು ಮಾವಿನಹಣ್ಣನ್ನು ತಿನ್ನುವ ಮೊದಲು 20-30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಲು ಶಿಫಾರಸು ಮಾಡುತ್ತಾರೆ. ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಮೇಲ್ಮೈಯಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಮಾಂತ್ರಿಕ ಪರಿಹಾರವಲ್ಲದಿದ್ದರೂ, ನೈರ್ಮಲ್ಯಕ್ಕಾಗಿ ಅಳವಡಿಸಿಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries