HEALTH TIPS

ಕದನ ವಿರಾಮ ಪ್ರಸ್ತಾವಕ್ಕೆ ಇರಾನ್ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ: ಟ್ರಂಪ್

ವಾಷಿಂಗ್ಟನ್: ಪಾಕಿಸ್ತಾನಿ ಮಧ್ಯಸ್ಥಿಗೆದಾರರ ಮೂಲಕ ಅಮೆರಿಕ ಕಳುಹಿಸಿದ್ದ ಇತ್ತೀಚಿನ ಕದನ ವಿರಾಮ ಒಪ್ಪಂದದ ಪ್ರಸ್ತಾವಕ್ಕೆ ಇರಾನ್ ತನ್ನ ಪ್ರತಿಕ್ರಿಯೆಯನ್ನು ಕಳುಹಿಸಿಕೊಟ್ಟಿದ್ದು, ಇರಾನ್ ಬೆಂಬಲಿತ ಹಿಬ್ಬುಲ್ಲಾ ಮೇಲೆ ಇಸ್ರೇಲ್ ಲೆಬನಾನ್ ನಲ್ಲಿ ನಡೆಸುತ್ತಿರುವ ದಾಳಿ ಸೇರಿದಂತೆ ಈ ಭಾಗದಲ್ಲಿ ಯುದ್ಧವನ್ನು ಕಾಯಂ ಆಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದೆ.

ಆದರೆ ಇರಾನ್ ನಿಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದು, "ಇದು ಸ್ವೀಕಾರಾರ್ಹವಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಾದೇಶಿಕ ಭದ್ರತೆಯನ್ನು ಖಾತರಿಪಡಿಸುವುದು ಮತ್ತು ಸುರಕ್ಷಿತ ಸಾಗರ ಪ್ರಯಾಣದಂತಹ ಅಂಶಗಳನ್ನು ಒಪ್ಪಂದ ಒಳಗೊಳ್ಳಬೇಕು ಎಂದು ಇರಾನ್ ಬಯಸಿದ್ದಾಗಿ ಸರ್ಕಾರಿ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಇತ್ತೀಚೆಗೆ ಮುಂದಿಟ್ಟಿರುವ ಶಾಂತಿ ಒಪ್ಪಂದದ ಕರಡಿನಲ್ಲಿ, ಸಂಘರ್ಷವನ್ನು ಶಮನಗೊಳಿಸುವುದು, ಹಾರ್ಮುಝ್ ಜಲಸಂಧಿಯನ್ನು ತೆರೆಯುವುದು ಮತ್ತು ಇರಾನ್ ನ ಅಣ್ವಸ್ತ್ರ ಯೋಜನೆಯನ್ನು ರದ್ದುಪಡಿಸುವುದು ಸೇರಿದೆ.

ಇರಾನ್ ಅಮೆರಿಕದ ಜತೆ ಕಳೆದ ಐದು ದಶಕಗಳಿಂದ ಆಟವಾಡುತ್ತಿದೆ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್, "ಇನ್ನೆಂದೂ ಅವರು ನಗಲು ಸಾಧ್ಯವಿಲ್ಲ" ಎಂದಿದ್ದಾರೆ. ಹೆಚ್ಚುತ್ತಿರುವ ಸಂಘರ್ಷದ ನಡುವೆಯೂ ಅಮೆರಿಕ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ಮೈಕ್ ವಾಲ್ಟ್ಸ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries