ಬೀಜಿಂಗ್: ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿರುವುದನ್ನು ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಒಪ್ಪಿಕೊಂಡಿದೆ.
ಚೀನಾದ ಸರ್ಕಾರಿ ಸ್ವಾಮ್ಯದ 'ಏವಿಯೇಷನ್ ಇಂಡಸ್ಟ್ರಿ ಕಾರ್ಪೊರೇಷನ್ ಆಫ್ ಚೀನಾ'ದ ಎಂಜಿನಿಯರ್‌ಗಳು ಪಾಕಿಸ್ತಾನದ ಸೇನಾ ನೆಲೆಗಳಲ್ಲಿ ಇದ್ದುಕೊಂಡು ತಾಂತ್ರಿಕ ಬೆಂಬಲ ನೀಡಿರುವುದಾಗಿ ಹೇಳಿದ್ದಾರೆ.
ಭಾರತ ವಿರುದ್ಧ ಕಾರ್ಯಾಚರಣೆಯಲ್ಲಿ ಚೀನಾ ನಿರ್ಮಿತ ಜೆ-10ಸಿಇ ಯುದ್ಧ ವಿಮಾನಗಳು ಬಳಕೆಯಾಗಿದ್ದವು.
ರಣಭೂಮಿಯಲ್ಲಿ ಯುದ್ಧ ವಿಮಾನಗಳ ಸದ್ದು ಹಾಗೂ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗುತ್ತಿದ್ದವು ಎಂದು ಎಂಜಿನಿಯರ್ ಜಾಂಗ್ ಹೆಂಗ್ ನೆನಪಿಸಿಕೊಂಡಿದ್ದಾರೆ.
ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧ ತೀವ್ರಗೊಂಡಿತ್ತು.

