HEALTH TIPS

ಜೆರುಸಲೇಂನಲ್ಲಿ ಸೊಮಾಲಿಲ್ಯಾಂಡ್ ದೂತಾವಾಸ ತೆರೆಯುವುದಕ್ಕೆ ಮುಸ್ಲಿಂ ರಾಷ್ಟ್ರಗಳಿಂದ ವಿರೋಧ

 ರಿಯಾದ್: ಜೆರುಸಲೇಂನಲ್ಲಿ ಉದ್ದೇಶಿತ ಸೊಮಾಲಿಲ್ಯಾಂಡ್ ರಾಯಭಾರ ಕಚೇರಿ ತೆರೆಯುವುದನ್ನು ಸೌದಿ ಅರೇಬಿಯಾ ಸೇರಿದಂತೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಸಚಿವರು ರವಿವಾರ ಬಲವಾಗಿ ಖಂಡಿಸಿದ್ದಾರೆ.


ಸೊಮಾಲಿಯಾದಿಂದ ಬೇರ್ಪಟ್ಟ ಪ್ರದೇಶವಾದ ಸೊಮಾಲಿಲ್ಯಾಂಡ್ 2025ರಲ್ಲಿ ತನ್ನನ್ನು ಗಣರಾಜ್ಯ ಎಂದು ಸ್ವಯಂ ಘೋಷಿಸಿಕೊಂಡಿತ್ತು.

ಇಸ್ರೇಲ್ ಇದನ್ನು ಇದುವರೆಗೆ ಅಧಿಕೃತವಾಗಿ ಮಾನ್ಯ ಮಾಡಿರುವ ಏಕೈಕ ದೇಶವಾಗಿದ್ದು ಜೆರುಸಲೇಂನಲ್ಲಿ ಸೊಮಾಲಿಲ್ಯಾಂಡ್‌ನ ರಾಯಭಾರ ಕಚೇರಿ ತೆರೆಯಲು ಅನುಮತಿ ನೀಡಿರುವುದಾಗಿ ಘೋಷಿಸಿತ್ತು.

ಇಸ್ರೇಲ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು `ಇದು ಅಂತಾರಾಷ್ಟ್ರೀಯ ಕಾನೂನಿನ ಮತ್ತು ಆಕ್ರಮಿತ ಜೆರುಸಲೇಂನ ಕಾನೂನು ಮತ್ತು ಐತಿಹಾಸಿಕ ಸ್ಥಾನಮಾನದ ನೇರ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ. ಪೂರ್ವ ಜೆರುಸಲೇಂ 1967ರಿಂದ ಆಕ್ರಮಣಕ್ಕೆ ಒಳಗಾಗಿರುವ ಫೆಲೆಸ್ತೀನಿಯನ್ ಪ್ರದೇಶವಾಗಿದ್ದು ಅದರ ಕಾನೂನು ಮತ್ತು ಐತಿಹಾಸಿಕ ಸ್ಥಾನಮಾನವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ಯಾವುದೇ ಕ್ರಮಗಳು ಅನೂರ್ಜಿತ ಮತ್ತು ಯಾವುದೇ ಕಾನೂನು ಪರಿಣಾಮವನ್ನು ಹೊಂದಿರುವುದಿಲ್ಲ' ಎಂದು ಹೇಳಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries