ನವದೆಹಲಿ: ಮೇ 28ರಂದು ನಿಗದಿಯಾಗಿದ್ದ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ-ಯುಜಿ) 2026 ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ತಿಳಿಸಿದೆ.
ಬಕ್ರೀದ್ ಹಬ್ಬದ ರಜಾ ದಿನಾಂಕದಲ್ಲಿ ಬದಲಾವಣೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.
ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು. ಏನೇ ಸಂದೇಹಗಳಿದ್ದರೂ ಎನ್‌ಟಿಎ ಸಹಾಯವಾಣಿ ಸಂಪರ್ಕಿಸಲು ಸೂಚಿಸಲಾಗಿದೆ.
ಕೇಂದ್ರ, ರಾಜ್ಯ ಮತ್ತು ಆಯ್ದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪದವಿವೂರ್ವ ಪ್ರವೇಶಾತಿಗಳನ್ನು ಏಕರೂಪಗೊಳಿಸುವ ಉದ್ದೇಶದಿಂದ 2022ರಲ್ಲಿ ಸಿಯುಇಟಿ-ಯುಜಿ ಅನ್ನು ಪರಿಚಯಿಸಲಾಯಿತು.

