HEALTH TIPS

ಹಾರ್ಮುಝ್‌ನಲ್ಲಿ ಅಮೆರಿಕದ ಶೋಷಣೆಗೆ ಅವಕಾಶವಿಲ್ಲ: ಇರಾನ್‍ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ

ಟೆಹರಾನ್: ಹಾರ್ಮುಝ್‌ ಜಲಸಂಧಿಯನ್ನು ನಿಯಂತ್ರಿಸುವ ಹೊಸ ಕಾನೂನು ಮತ್ತು ಆಡಳಿತಾತ್ಮಕ ನಿಯಮಗಳನ್ನು ಇರಾನ್ ಪರಿಚಯಿಸುತ್ತದೆ. ವಿಶ್ವದ ಅತ್ಯಂತ ಆಯಕಟ್ಟಿನ ಜಲಮಾರ್ಗದಲ್ಲಿ ಅಮೆರಿಕನ್ನರ `ಶೋಷಣೆಯನ್ನು' ಕಿತ್ತುಹಾಕಲು ಬದ್ಧವಾಗಿದೆ ಎಂದು ಇರಾನ್‍ನ ಸರ್ವೋಚ್ಛ ನಾಯಕ ಆಯತುಲ್ಲಾ ಮೊಜ್ತಬಾ ಖಾಮಿನೈ ಗುರುವಾರ ಹೇಳಿದ್ದಾರೆ.

ವಲಯದಲ್ಲಿ ಅಸ್ಥಿರತೆಗೆ ಅಮೆರಿಕ ಮೂಲ ಕಾರಣವಾಗಿದೆ ಎಂದು ಆಪಾದಿಸಿದ ಖಾಮಿನೈ, ನಾವು ಮತ್ತು ನಮ್ಮ ನೆರೆಹೊರೆಯವರು ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಲ್ಲಿ ಸಾಮಾನ್ಯ ಉದ್ದೇಶಗಳನ್ನು ಹಂಚಿಕೊಂಡಿದ್ದೇವೆ. ದುರಾಸೆ ಮತ್ತು ದುರುದ್ದೇಶದಿಂದ ವರ್ತಿಸಲು ಸಾವಿರಾರು ಕಿ.ಮೀ ದೂರದಿಂದ ಬರುವ ವಿದೇಶಿಗರಿಗೆ ಅದರಲ್ಲಿ ಸ್ಥಾನವಿಲ್ಲ. ಅದರ ನೀರಿನ ತಳಭಾಗವನ್ನು ಹೊರತುಪಡಿಸಿ' ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇರಾನ್ ತನ್ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ರಾಷ್ಟ್ರೀಯ ಆಸ್ತಿಯಾಗಿ ರಕ್ಷಿಸುತ್ತದೆ. ದೇಶದ ಒಳಗೆ ಮತ್ತು ಹೊರಗೆ ಇರುವ 90 ದಶಲಕ್ಷ ಹೆಮ್ಮೆಯ ಮತ್ತು ಗೌರವಾನ್ವಿತ ಇರಾನಿಯನ್ನರು ಇರಾನ್‍ನ ಎಲ್ಲಾ ಆಧ್ಯಾತ್ಮಿಕ, ಮಾನವ, ವೈಜ್ಞಾನಿಕ, ಕೈಗಾರಿಕಾ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ರಾಷ್ಟ್ರೀಯ ಆಸ್ತಿಯೆಂದು ಪರಿಗಣಿಸುತ್ತಾರೆ ಮತ್ತು ದೇಶದ ನೀರು, ಭೂಮಿ ಮತ್ತು ವಾಯುಪ್ರದೇಶವನ್ನು ರಕ್ಷಿಸುವಂತೆಯೇ ಇವುಗಳನ್ನೂ ರಕ್ಷಿಸಲು ಆದ್ಯತೆ ನೀಡುತ್ತಾರೆ' ಎಂದು ಖಾಮಿನೈ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries