HEALTH TIPS

ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಮಾಡಲು ಪಾಲಿಸಬೇಕಾದ ಸರಳ ಟಿಪ್ಸ್; ಆರೋಗ್ಯಕರ ಸಲಹೆ

ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಮಾಡಲು ಕೆಲವು ಸಲಹೆ, ಆರೋಗ್ಯಕರ ಪರ್ಯಾಯ ವಿಧಾನಗಳನ್ನೂ ಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಸಲಹೆಗಳಿಂದ ನಿಮ್ಮ ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೇ ಆರೋಗ್ಯಕರವಾಗಿರುತ್ತದೆ.

ಬೆಳಗಿನ ತಿಂಡಿಗೆ ಪೂರಿ ಅಂದ್ರೆ ಬಹುತೇಕರಿಗೆ ಇಷ್ಟವಾಗುತ್ತದೆ.

ಆದ್ರೆ ಎಣ್ಣೆಯಲ್ಲಿ ಡೀಪ್ ಫ್ರೈ ಆಗಿರೋದರಿಂದ ಬಹುತೇಕರು ಪೂರಿ ತಿನ್ನಲು ಹಿಂದೇಟು ಹಾಕುತ್ತಾರೆ. ಇಂದು ನಾವು ಹೇಳುವ ಕೆಲವು ಸಲಹೆಗಳನ್ನು ಪಾಲನೆ ಮಾಡಿದ್ರೆ ನಿಮ್ಮ ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೇ ಆರೋಗ್ಯಕರವಾಗಿರುತ್ತದೆ.

ಪೂರಿ ತಯಾರಿಸಲು ಹಿಟ್ಟು ನಾದಿಕೊಳ್ಳುವಾಗ ಮೊದಲಿಗೆ ಒಂದು ಅಥವಾ ಎರಡು ಟೀ ಸ್ಪೂನ್‌ನಷ್ಟು ಎಣ್ಣೆ ಅಥವವಾ ತುಪ್ಪ ಸೇರಿಸಿಕೊಳ್ಳಬೇಕು. ಇದರಿಂದ ಪೂರಿ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳಲ್ಲ. ಈ ವಿಧಾನದಿಂದ ಆರೋಗ್ಯಕರ ಪೂರಿ ತಯಾರಿಸಬಹುದು.

ಪೂರಿ ಮಾಡುವ ಮುಂಚೆಯೇ ಎಣ್ಣೆಯನ್ನು ಸಂಪೂರ್ಣವಾಗಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತರವೇ ಪೂರಿಯನ್ನು ಹಾಕಿಕೊಂಡ್ರೆ ಅದು ಬೇಗ ಉಬ್ಬಿಕೊಂಡು ಮೇಲೆ ಬರುತ್ತದೆ. ಸಂಪೂರ್ಣವಾಗಿ ಬಿಸಿಯಾಗದಿದ್ರೆ ಆಗ ಪೂರಿ ಹೆಚ್ಚು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಪೂರಿ ಫ್ರೈ ಮಾಡಿಕೊಳ್ಳುವಾಗ ಬಾಣಲೆ ತುಂಬಾ ಎಣ್ಣೆ ಹಾಕಿಕೊಳ್ಳಬೇಲು. ಹಾಕಿದ ಪೂರಿ ತೇಲುವಂತಿರಬೇಕು.

ಎಣ್ಣೆಯ ಅಂಶ ಕಡಿಮೆ ಮಾಡಿಕೊಳ್ಳಲು ಬಯಸುವವರ ಇಂದು ಏರ್‌ಫ್ರೈಯರ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಟ್ಟಿಸಿದ ಪೂರಿ ಮೇಲೆ ಸ್ವಲ್ಪ ಎಣ್ಣೆ ಸವರಿ ಏರ್‌ಫ್ರೈಯರ್ ನಲ್ಲಿಟ್ರೆ ಪೂರಿ ಸಿಗುತ್ತದೆ. ಡಯಟ್, ತೂಕ ಇಳಿಕೆ ಮಾಡುವ ಜನರು ಏರ್‌ಫ್ರೈಯರ್ ಪೂರಿ ಬಳಸಬಹುದು.

ನೋ ಆಯಿಲ್ ಎಂಬ ಕಲ್ಪನೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ಈ ಟ್ರೆಂಡ್‌ನಲ್ಲಿ ಬಾಣಲೆಗೆ ನೀರು ಹಾಕಿಕೊಳ್ಳುತ್ತಾರೆ. ನೀರು ಕುದಿ ಬರುತ್ತಿದ್ದಂತೆ ಪೂರಿಯನ್ನು ಹಾಕಿ ಬೇಯಿಸಿಕೊಳ್ಳಿ. ನೀರಿನಿಂದ ತೆಗೆದ ಪೂರಿಯನ್ನು ಜರಡಿ ಮೇಲೆ ಹಾಕಬೇಕು. ನೀರು ಸಂಪೂರ್ಣವಾಗಿ ಇಳಿದ ನಂತರ ಪೂರಿ ತಿನ್ನಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries