HEALTH TIPS

ಪ್ರಸ್ತಾವ ಪರಿಶೀಲಿಸುತ್ತಿದ್ದೇವೆ: ಇರಾನ್‌

ದುಬೈ / ವ್ಯಾಟಿಕನ್‌ (AP): 'ಪಶ್ಚಿಮಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮುಂದಿಟ್ಟಿರುವಅಂತಿಮ ಒಪ್ಪಂದ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದೇವೆ' ಎಂದು ಇರಾನ್‌ ಹೇಳಿದೆ.

ಆದಷ್ಟು ಬೇಗ ಅಂತಿಮ ಒಪ್ಪಂದಕ್ಕೆ ಸಹಿ ಹಾಕಿ, ಹೊರ್ಮುಜ್‌ ಜಲಸಂಧಿ ತೆರೆ ಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಮೇಲೆ ಒತ್ತಡ ಮುಂದುವರಿಸಿದ್ದಾರೆ.

ಇಲ್ಲದಿದ್ದರೆ ಬಾಂಬ್‌ ದಾಳಿ ಮುಂದುವರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಅಮೆರಿಕ ಇರಾನ್‌ ಬಂದರಿನ ಮೇಲೆ ದಿಗ್ಬಂಧನ ಹೇರಿದ್ದು, ಇದನ್ನು ಉಲ್ಲಂಘಿ ಸಿದ ಕಾರಣಕ್ಕೆ ಒಮಾನ್‌ ಕರಾವಳಿಯಲ್ಲಿ ಇರಾನ್‌ ತೈಲ ನೌಕೆಯ ಮೇಲೆ ಅಮೆರಿಕದ ಸೇನೆ ಬುಧವಾರ ದಾಳಿ ನಡೆಸಿದೆ. ಈ ಘಟನೆ ಹೊರತುಪಡಿಸಿದರೆ ಅಮೆರಿಕ-ಇರಾನ್‌ ನಡುವೆ ಕೆಲವು ದಿನಗಳಿಂದ ಬೇರೆ ದಾಳಿಗಳು ವರದಿಯಾಗಿಲ್ಲ.

ಯುದ್ಧಾಂತ್ಯಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿರುವುದರಿಂದ ಮಾರುಕಟ್ಟೆ ಪೂರಕವಾಗಿ ಸ್ಪಂದಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ ₹100 ಡಾಲರ್‌ಗಳಿಗೆ ಸ್ಥಿರಗೊಂಡಿದೆ.

ಅಮೆರಿಕ- ಇರಾನ್‌ ನಡುವೆ ಏಪ್ರಿಲ್‌ 8ರಿಂದ ದುರ್ಬಲವಾದ ಕದನ ವಿರಾಮ ಜಾರಿಯಲ್ಲಿದೆ. ಉಭಯ ದೇಶಗಳ ನಡುವೆ ಅಂತಿಮ ಸುತ್ತಿನ ನೇರ ಮಾತುಕತೆ ಆಯೋಜಿಸಲು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಒಂದು ತಿಂಗಳಿಂದ ಸತತವಾಗಿ ಶ್ರಮಿಸುತ್ತಿದೆ.

14ರಿಂದ ಟ್ರಂಪ್‌ ಚೀನಾ ಪ್ರವಾಸ: ಡೊನಾಲ್ಡ್‌ ಟ್ರಂಪ್‌ ಅವರು ಮೇ 14 ಮತ್ತು 15ರಂದು ಚೀನಾ ಪ್ರವಾಸ ನಡೆಸಲಿದ್ದು, ಅಧ್ಯಕ್ಷ ಷಿ ಜಿನ್‌ಪಿಂಗ್‌ ಜತೆಗೆ ಮಾತುಕತೆ ನಡೆಸಲಿದ್ದಾರೆ. ಟ್ರಂಪ್‌ ಚೀನಾ ಭೇಟಿಗೂ ಮುನ್ನವೇ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಚೀನಾಕ್ಕೆ ಭೇಟಿ ನೀಡಿದ್ದು, ಹೊರ್ಮುಜ್‌ ಜಲಸಂಧಿ ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.

ಮಾತುಕತೆ: 'ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಪೋಪ್‌ 14ನೇ ಲಿಯೊ ಜತೆಗೆ ಮಾತುಕತೆ ನಡೆಸಿದ್ದೇನೆ' ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries