ಕಾಸರಗೋಡು: ಶ್ರೀ ಕ್ಷೇತ್ರ ಕಾಳ್ಯಂಗಾಡಿನ ಬ್ರಹ್ಮಕಲಶೋತ್ಸವ ಸಲುವಾಗಿ ಇಲ್ಲಿನ ಶ್ರೀ ಮೂಕಾಂಬಿಕಾ ಆರ್ಟ್ಸ್ ಮತ್ತು ಸ್ಪೋರ್ಸ್ ಕ್ಲಬ್ ಪ್ರಾಯೋಜಕರಲ್ಲಿ ಮಾತೃ ಸಮಿತಿಯ ನೇತೃತ್ವದಲ್ಲಿ ಕಲಾವಿದೆಯರು ನಡೆಸಿಕೊಟ್ಟ ಕೈಕೊಟ್ಟು ಕಳಿ ತನ್ನದೇ ವೈಶಿಷ್ಠ್ಯದಿಂದ ಜನಮನ ರಂಜಿಸಿದೆ.
ಇಲ್ಲಿನ ಕಲಾಸ್ನೇಹಿ ಮಕ್ಕಳು ಈ ಕಲಾಪ್ರಸ್ತುತಿಯನ್ನು ನೋಡಿ ಮೂಕರಾಗಿ ವಿಸ್ಮಯಗೊಂಡಿದ್ದರು. ಭವಿಷ್ಯದ ಕಲಾವಿದರಾಗಿರುವ ಈ ಪುಟಾಣಿಗಳು ಇಂಥಾ ಕಲಾಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮುಂದಿನ ತಮ್ಮ ಕಲಾಜೀವನಕ್ಕೆ ಪಾಠವನ್ನು ಕಲಿಯುತ್ತಿರುವುದು ಈ ಮೂಲಕ ಸಾಬೀತಾಗಿದೆ.

