HEALTH TIPS

ಎನ್‌ಸಿಬಿ ಮುಖ್ಯಸ್ಥ ಅನುರಾಗ್ ಗರ್ಗ್ ಸೇವಾ ಅವಧಿ ವಿಸ್ತರಣೆ

 ನವದೆಹಲಿ: ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಮಹಾನಿರ್ದೇಶಕರಾದ ಅನುರಾಗ್ ಗರ್ಗ್ ಅವರ ಸೇವಾ ಅವಧಿಯನ್ನು ಕೇಂದ್ರ ಸರ್ಕಾರ 2027ರ ಜುಲೈ ಅಂತ್ಯದವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯ ಅಧಿಕೃತ ಆದೇಶ ಪ್ರಕಟಿಸಿದೆ. 


ಹಿಮಾಚಲ ಪ್ರದೇಶ ಕೆಡರ್‌ನ 1993ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಯಾದ ಅನುರಾಗ್ ಗರ್ಗ್ ಅವರನ್ನು 2024ರ ಸೆಪ್ಟೆಂಬರ್‌ನಲ್ಲಿ ಎನ್‌ಸಿಬಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

ಅನುರಾಗ್ ಗರ್ಗ್ ಅವರ ಪ್ರಸ್ತುತ ಸೇವಾ ಅವಧಿ ಇದೇ ಮೇ 23ಕ್ಕೆ (ನಾಳೆ) ಕೊನೆಗೊಳ್ಳಬೇಕಿತ್ತು. ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಗರ್ಗ್ ಅವರ ಅವಧಿಯನ್ನು ಜುಲೈ 31, 2027ರವರೆಗೂ ವಿಸ್ತರಿಸಿದೆ.

ಅನುರಾಗ್ ಗರ್ಗ್ ನೇತೃತ್ವದಲ್ಲಿ ಎನ್‌ಸಿಬಿ ಇತ್ತೀಚೆಗೆ ಹಲವು ಪ್ರಮುಖ ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲಗಳನ್ನು ಪತ್ತೆ ಹಚ್ಚಿ ಧ್ವಂಸ ಮಾಡಿತ್ತು. ಕಳೆದ ವರ್ಷ ಸಾವಿರಾರು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ನಾಶ ಮಾಡಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries