ಕೈರೊ: ಡ್ರೋನ್ ದಾಳಿಯಿಂದಾಗಿ ಅಬುದಾಭಿಯಲ್ಲಿರುವ ಅಣುಸ್ಥಾವರದ ಸಮೀಪ ಬೆಂಕಿ ಕಾಣಿಸಿಕೊಂಡಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಸೋಸಿಯೇಟ್ ಪ್ರೆಸ್ ವರದಿ ಮಾಡಿದೆ.
ಅಲ್ ಧ್ರಫ್ರಾದಲ್ಲಿರುವ ಬರಕ ಅಣುಸ್ಥಾವರದ ಸಮೀಪ ಇರುವ ಹೊರಾಂಗಣ ವಿದ್ಯುತ್ ಜನರೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಕಿರಣ ಸೋರಿಕೆಯ ಅಪಾಯವಿಲ್ಲ ಎಂದೂ ಅದು ತಿಳಿಸಿದೆ.
ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮ ಜಾರಿಯಲ್ಲಿರುವಾಗಲೇ ಈ ದಾಳಿ ನಡೆದಿದೆ. ಕದನ ವಿರಾಮ ಜಾರಿಯಲ್ಲಿದ್ದರೂ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

