HEALTH TIPS

ಚೀನಾದ ಮಾಜಿ ರಕ್ಷಣಾ ಸಚಿವರಿಗೆ ಮರಣದಂಡನೆ ಘೋಷಣೆ

 ಬೀಜಿಂಗ್: ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಚೀನಾದ ಇಬ್ಬರು ಮಾಜಿ ರಕ್ಷಣಾ ಸಚಿವರಾದ ವೆಯಿ ಫೆಂಗೆ ಹಾಗೂ ಲೀ ಶಾಂಘ್‌ಫು ಅವರಿಗೆ ಎರಡು ವರ್ಷಗಳ ತಾತ್ಕಾಲಿಕ ಮುಂದೂಡುವಿಕೆಯೊಂದಿಗೆ ಮರಣದಂಡನೆ ಘೋಷಿಸಲಾಗಿದೆ. 


ಚೀನಾದ ಸೇನಾ ನ್ಯಾಯಾಲಯವು ಇಬ್ಬರು ಮಾಜಿ ರಕ್ಷಣಾ ಸಚಿವರಿಗೆ ಪ್ರತ್ಯೇಕವಾಗಿ ಈ ಶಿಕ್ಷೆ ವಿಧಿಸಿದೆ.

ಚೀನಾದ ಕಾನೂನು ಪ್ರಕಾರ ಅಮಾನತಿನಲ್ಲಿರಿಸಲಾದ ಮರಣದಂಡನೆಯಲ್ಲಿ ಆರೋಪಿಗಳು ತಕ್ಷಣವೇ ಮರಣದಂಡನೆಗೆ ಒಳಪಡುವುದಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ಅವರು ಯಾವುದೇ ಗಂಭೀರ ಅಪರಾಧ ಎಸಗದೆ ಇದ್ದಲ್ಲಿ, ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗುತ್ತದೆ.

ವೆಯಿ ಹಾಗೂ ಅವರ ಉತ್ತರಾಧಿಕಾರಿ ಲೀ ಇಬ್ಬರೂ ಕ್ಸಿ ಜಿನ್‌ಪಿಂಗ್ ಆಡಳಿತದಲ್ಲಿ ಕಾರ್ಯನಿರ್ವಹಿಸಿದ್ದು, ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ 2024ರಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ಉಚ್ಚಾಟಿತರಾಗಿದ್ದರು.

ವೆಯಿ ಅವರು 2018ರಿಂದ 2023ರವರೆಗೆ ರಕ್ಷಣಾ ಸಚಿವರಾಗಿದ್ದರು. ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಲೀ ಕೆಲವೇ ತಿಂಗಳು ಕಾರ್ಯನಿರ್ವಹಿಸಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries