ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಅವರು ಮುಂಬೈನಲ್ಲಿ ಪಶ್ಚಿಮ ನೌಕಾಪಡೆಯ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 31 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅವರ ಅಧಿಕಾರಾವಧಿಯು 2028ರ ಡಿಸೆಂಬರ್ 31ರವರೆಗೆ ಇರುತ್ತದೆ.
2024ರ ಏಪ್ರಿಲ್ 30ರಂದು ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ಕೃಷ್ಣ ಸ್ವಾಮಿನಾಥನ್ ಉನ್ನತ ಹುದ್ದೆಗೆ ಏರಲಿದ್ದಾರೆ. ಇದಕ್ಕೂ ಮೊದಲು, ಅಡ್ಮಿರಲ್ ತ್ರಿಪಾಠಿ ಅವರು ಸಹ ನೌಕಾಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

