ಮಾಸ್ಕೊ (PTI): 'ಭಾರತ ಮತ್ತು ರಷ್ಯಾದ ಸಂಬಂಧವು ಸ್ನೇಹದ ಆಧಾರದಲ್ಲಿ ಮೂಡಿದೆ. ಇಂಧನ ಪೂರೈಕೆ ವಿಚಾರದಲ್ಲಿ ಭಾರತದ ಅಗತ್ಯವನ್ನು ನೀಗಿಸಲಾಗುವುದು. ಬಾಹ್ಯವಾದ ಎಷ್ಟೇ ಒತ್ತಡ ಇದ್ದರೂ ಇಂಧನ ಪೂರೈಕೆಯಲ್ಲಿ ವ್ಯತ್ಯಯ ವಾಗುವುದಿಲ್ಲ' ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊ ಹೇಳಿದರು.
'ರಷ್ಯಾ ಟುಡೆ' ಸುದ್ದಿ ಸಂಸ್ಥೆಗೆ ಅವರು ಸಂದರ್ಶನ ನೀಡಿದರು. ಬ್ರಿಕ್ಸ್ನ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಲಾವ್ರೊ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. 'ಇಂಧನ ಪೂರೈಕೆ ವಿಚಾರದಲ್ಲಿ ಭಾರತ ಮಾತ್ರವಲ್ಲ ಯಾವುದೇ ದೇಶದ ವಿಚಾರದಲ್ಲಿಯೂ ರಷ್ಯಾವು ಎಂದಿಗೂ ಸಮಸ್ಯೆ ಮಾಡಿಲ್ಲ ಎಂದು ಹೇಳಿದ್ದಾರೆ.

