HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಮುಂದುವರಿದ ಬಿರುಸಿನ ಮಳೆ: ಮರ ಉರುಳಿ ಮನೆಗೆ ಹಾನಿ, ರಸ್ತೆಯಲ್ಲಿ ಬಿರುಕು

ಕಾಸರಗೋಡು: ಜಿಲ್ಲೆಯ ನಾನಾ ಕಡೆ ಶನಿವಾರ ಬಿರುಸಿನ ಮಳೆಯಾಗಿದೆ. ಗುಡು, ಗಾಳಿಯಿಂದ ಕೂಡಿದ ಮಳೆಗೆ ವಿವಿಧೆಡೆ ಮರ ಉರುಳಿ ಹಾನಿ ಸಂಭವಿಸಿದೆ. ಸಂಜೆಯಿಂದ ತಡರಾತ್ರಿ ವರೆಗೂ ಮಳೆಯಾಗಿದ್ದು, ಭಾನುವಾರವೂ ಮೋಡದ ವಾತಾವರಣ ಮುಂದುವರಿದಿದೆ. 


ಬಿರುಸಿನ ಗಾಳಿಗೆ ಕಾಸರಗೋಡು ಕೇಳುಗುಡ್ಡೆ ಪ್ರದೇಶದಲ್ಲಿ ಬೃಹತ್ ಮರ ಉರುಳಿ ಪತ್ರಿಕಾ ಛಾಯಾಗ್ರಾಹಕ ಕುಮಾರ್ ಕಾಸರಗೋಡು ಅವರ ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿದ್ದವರುಜೀವಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ಸುರಿದ ಬೇಸಿಗೆ ಮಳೆಗೆ ರಾಷ್ಟ್ರೀಯ ಹೆದ್ದಾರಿ ಚೆರ್ವತ್ತೂರಿನಲ್ಲಿ ನಿರ್ಮಾಣಹಂತದ ರಸ್ತೆ ಸುಮಾರು 50ಮೀ. ವರೆಗೂ ಬಿರುಕು ಬಿಟ್ಟಿದ್ದು, ರಸ್ತೆ ಅಪಾಯದ ಸ್ಥೀತಿಯಲ್ಲಿದೆ. ಬಿರುಕು ಮುಚ್ಚುವ ಕೆಲಸ ಮುಮದುವರಿದಿದೆ. ಬೇಸಿಗೆ ಮಳೆಗೆ ಈ ಪ್ರದೇಶದಲ್ಲಿ ಸರ್ವೀಸ್ ರಸ್ತೆಯಲ್ಲೂ ನೀರು ತುಂಬಿಕೊಂಡಿದ್ದು, ಸಣ್ಣ ವಾಹನಗಳು ಹಾಗೂ ಪಾದಚರಿಗಳ ಸಂಚಾರಕಕೆ ತೊಡಕುಂಟಾಗುತ್ತಿದೆ.

 ಬಿರುಸಿನ ಮಳೆಗೆ ಮರ ಉರುಳಿ ಬಿದ್ದು, ಕೇಳುಗುಡ್ಡ ಪ್ರದೇಶದ ಕುಮಾರ್‍ಕಾಸರಗೋಡು ಅವರ ಮನೆಗೆ ಹಾನಿ ಸಂಭವಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries