ಕಾಸರಗೋಡು: ಆಲ್ ಕೇರಳ ವೆಲ್ಫೇರ್ ಅಸೋಸಿಯೇಷನ್ ಆಫ್ ಎಕ್ಸ್-ಆರ್ಮಿ ಏವಿಯೇಷನ್ ಟೆಕ್ಟ್‍ನ ರಾಜ್ಯ ಮಟ್ಟದ 12 ನೇ ಕುಟುಂಬ ಸಂಗಮ ಕಾರ್ಯಕ್ರಮ ಉದುಮ ಕಲಾನಾಡ್ ಕೆಹೆಚ್ ರೆಸಿಡೆನ್ಸಿಯಲ್ಲಿ ಜರುಗಿತು.
ಸಂಸ್ಥೆಯ ರಾಜ್ಯ ಅಧ್ಯಕ್ಷ ಕೆ.ಜೆ. ಥಾಮಸ್ ಸಮಾರಂಭ ಉದ್ಘಾಟಿಸಿದರು. ಪೆÇೀಷಕರಾದ ವಕೀಲ ಪಿ.ಜೆ. ಜಾರ್ಜ್, ಚಂದ್ರಶೇಖರನ್, ಮಹಿಳಾ ಕಾರ್ಯಕಾರಿ ಸದಸ್ಯರಾದ
ಬೀನಾ ಸಸಿ ಮತ್ತು ಬಿನ್ಸಿ ಮ್ಯಾಥ್ಯೂ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಪಿ. ಜಯಕುಮಾರ್ ಸ್ವಾಗತಿಸಿದರು. ನಂತರ ಚಿಲಂಪೆÇೀಲಿಯಿಂದ ಜಾನಪದ ನೃತ್ಯ ಪ್ರದರ್ಶನ, ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



