HEALTH TIPS

ಇಂಡೊ-ಪೆಸಿಫಿಕ್ ಉಪಕ್ರಮಕ್ಕೆ ನಾರ್ವೆ ಸೇರ್ಪಡೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

 ಓಸ್ಲೋ : ಭಾರತ ಮತ್ತು ನಾರ್ವೆ ಹಸಿರು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಪ್ರವೇಶಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ನಿಂತಿದ್ದಕ್ಕಾಗಿ ದೇಶಕ್ಕೆ ಧನ್ಯವಾದ ಅರ್ಪಿಸಿದ್ದಾರೆ.


ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ, 'ಇಂದಿನಿಂದ ನಾರ್ವೆಯು ಇಂಡೊ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಸೇರಲಿದೆ.

ಎರಡು ಪ್ರಮುಖ ಕಡಲ ರಾಷ್ಟ್ರಗಳಾಗಿ ನಾವು ಸಾಗರ ಆರ್ಥಿಕತೆ, ಕಡಲ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಬಲಪಡಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಘೋಷಿಸಿದರು.

ಭವಿಷ್ಯಕ್ಕಾಗಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ನಾರ್ವೆ ತಮ್ಮ ಪ್ರಮಾಣ, ವೇಗ, ಪ್ರತಿಭೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತವೆ. ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಲು ಇಸ್ರೋ ಮತ್ತು ನಾರ್ವೆಯ ಬಾಹ್ಯಾಕಾಶ ಏಜೆನ್ಸಿ ನಡುವೆ ದಾಖಲೆಗೆ ಸಹಿ ಹಾಕಲಾಗಿದೆ. ನಿಯಮಾಧಾರಿತ ವ್ಯವಸ್ಥೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೇಲೆ ಭಾರತ ಮತ್ತು ನಾರ್ವೆಗೆ ನಂಬಿಕೆಯಿದೆ. ಮಿಲಿಟರಿ ಸಂಘರ್ಷದ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂಬುದು ಎರಡೂ ದೇಶಗಳ ನಿಲುವಾಗಿದೆ. ಸಂಘರ್ಷ ಅಂತ್ಯಗೊಳಿಸಿ ಶಾಂತಿ ಮರುಸ್ಥಾಪನೆಯ ಗುರಿ ಹೊಂದಿರುವ ಎಲ್ಲಾ ಪ್ರಯತ್ನಗಳನ್ನೂ ನಾವು ಬೆಂಬಲಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಎರಡು ದಿವಸಗಳ ಅಧಿಕೃತ ಭೇಟಿಗಾಗಿ ಮೋದಿ ಸೋಮವಾರ ನಾರ್ವೆಗೆ ಆಗಮಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries