HEALTH TIPS

ಹೊರ್ಮುಜ್‌ ನಿರ್ವಹಣೆಗೆ ಹೊಸ ಸಂಸ್ಥೆ | ಹಡಗುಗಳಿಗೆ ಶುಲ್ಕ: ಇರಾನ್‌

 ಟೆಹರಾನ್‌: ಹೊರ್ಮುಜ್‌ ಜಲಸಂಧಿಯ ನಿರ್ವಹಣೆಗಾಗಿ ಹೊಸ ಸಂಸ್ಥೆ ಸ್ಥಾಪಿಸುವುದಾಗಿ ಇರಾನ್‌ನ ರಾಷ್ಟ್ರೀಯ ಉನ್ನತ ಭದ್ರತಾ ಮಂಡಳಿಯು ಸೋಮವಾರ ಘೋಷಿಸಿದೆ.


ಜಲಸಂಧಿ ಮೂಲಕ ಹಡಗುಗಳು ಸಂಚರಿಸಲು ಶುಲ್ಕ ವಿಧಿಸಲು ಇರಾನ್‌ ಬಯಸಿದ್ದು, ಏಪ್ರಿಲ್‌ನಿಂದಲೇ ಜಲಮಾರ್ಗದಲ್ಲಿನ ಸಂಚಾರಕ್ಕೆ ಶುಲ್ಕ ಸಂಗ್ರಹಿಸುತ್ತಿದೆ ಎನ್ನಲಾಗಿದೆ.

ಹೊರ್ಮುಜ್‌ನಲ್ಲಿನ ಕಾರ್ಯಾಚರಣೆಗೆ ಸಂಬಂಧಿಸಿದ ಹೊಸ ಬೆಳವಣಿಗೆ ಇದು ಎಂದು ಉನ್ನತ ಮಂಡಳಿಯು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಉಲ್ಲೇಖಿಸಿದೆ.

ಹೊಸ ಸಂಸ್ಥೆಯು ಯಾವ ರೀತಿ ಕಾರ್ಯಾಚರಿಸಲಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

'ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ಅದು ಶೀಘ್ರದಲ್ಲೇ ಜಾರಿಗೊಳ್ಳಲಿದೆ' ಎಂದು ಇರಾನ್‌ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥರಾದ ಇಬ್ರಾಹಿಂ ಅಜಿಜಿ ಅವರು ಶನಿವಾರವಷ್ಟೇ ಹೇಳಿದ್ದರು.

'ಹೊರ್ಮುಜ್‌ ಮೇಲೆ ಇರಾನ್‌ ಸಾರ್ವಭೌಮತ್ವ ಹೊಂದಿದೆ. ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಇ ಮೇಲ್‌ ಮೂಲಕ ನಿಯಮಗಳನ್ನು ಕಳುಹಿಸಲಾಗಿದೆ' ಎಂದು ಇರಾನ್‌ನ ಪ್ರೆಸ್‌ ಟಿ.ವಿ ಈ ತಿಂಗಳ ಆರಂಭದಲ್ಲಿ ವರದಿ ಮಾಡಿತ್ತು.

ಅಮೆರಿಕ- ಇರಸೇಲ್‌ ಜೊತೆಗೆ ಫೆ. 28ರಂದು ಯುದ್ಧ ಆರಂಭವಾದಾಗಿನಿಂದಲೂ ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರವನ್ನು ಇರಾನ್‌ ನಿರ್ಬಂಧಿಸಿದೆ. ಏ. 8ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಜಲಸಂಧಿಯು ಟೆಹರಾನ್‌ನ ಹಿಡಿತದಲ್ಲಿದೆ. ಇದರಿಂದ ಜಾಗತಿಕವಾಗಿ ಇಂಧನ ಸಮಸ್ಯೆ ಬಿಗಡಾಯಿಸಿದೆ. ಇರಾನ್‌ನ ಬಂದರುಗಳಿಗೆ ಅಮೆರಿಕ ನೌಕಾ ದಿಗ್ಬಂಧನ ವಿಧಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries