HEALTH TIPS

ಇರಾನ್‌ ಸಂಘರ್ಷದಿಂದ ಬೇಗ ಹೊರಬರಲ್ಲ; ಸಮಸ್ಯೆ ಮರುಕಳಿಸುವುದು ಇಷ್ಟವಿಲ್ಲ: ಟ್ರಂಪ್

ಫ್ಲಾರಿಡಾ: ಇರಾನ್ ಜೊತೆಗಿನ ಸಂಘರ್ಷದಿಂದ ಅಮೆರಿಕ ಆದಷ್ಟು ಬೇಗ ಹೊರಬರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್ಕದನ ವಿರಾಮ: ಇರಾನ್ ಮೇಲೆ ಎರಡು ವಾರ ಬಾಂಬ್‌ ಹಾಕುವುದಿಲ್ಲ ಎಂದ ಟ್ರಂಪ್

ಈಗ ಅರ್ಧದಲ್ಲೇ ಹೊರಬಂದು, ಮೂರು ವರ್ಷಗಳ ನಂತರ ಮತ್ತೆ ಅದೇ ಸಮಸ್ಯೆ ಎದುರಿಸುವುದನ್ನು ನಾವು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಕದನ ವಿರಾಮದ ಕಾರಣದಿಂದ ಈಗ ಸ್ಥಗಿತಗೊಂಡಿರುವ ಯುದ್ಧವನ್ನು ಕೊನೆಗಾಣಿಸಲು ಅಮೆರಿಕದ ಜೊತೆಗೆ ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಇರಾನ್ ಮೇಲೆ ಮತ್ತೆ ವಾಯುದಾಳಿ ನಡೆಸುವ ಸಾಧ್ಯತೆಯನ್ನು ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದಾರೆ.

ಕದನ ವಿರಾಮಕ್ಕೆ ಒಪ್ಪಿಗೆ...

ಇಲ್ಲಿನ ಒವಲ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, 'ಏಪ್ರಿಲ್ 8ರಂದು ಕೈಗೊಂಡ ಒಪ್ಪಂದದ ಪ್ರಕಾರ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿವೆ. ಒಂದೊಮ್ಮೆ ಅಮೆರಿಕವು ಯುದ್ಧ ಪುನಾರರಂಭಿಸಿದರೆ, ಮತ್ತೆ ವಾಯುದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ವೊಡ್ಡಿದೆ. ಆದರೆ, ಈಗ ಅದರ ಅಗತ್ಯವಿಲ್ಲ. ಅವರೇ ಕದನ ವಿರಾಮ ಮುರಿಯಲು ಸಿದ್ದರಿಲ್ಲ' ಎಂದು ಟ್ರಂಪ್ ತಿಳಿಸಿದ್ದಾರೆ.

'ಇರಾನ್ ಮೇಲೆ ನಾವು ನಡೆಸಿದ ಸೇನಾ ಕಾರ್ಯಾಚರಣೆಯ ಬಳಿಕ ಆ ದೇಶದ ಸೇನಾ ಸಾಮರ್ಥ್ಯ ತೀವ್ರವಾಗಿ ಕುಗ್ಗಿದೆ' ಎಂದು ಹೇಳಿದ್ದಾರೆ. 'ಅವರ ನೌಕಾಪಡೆ ನಾಶವಾಗಿದೆ, ವಾಯುಸೇನೆ ನಾಶವಾಗಿದೆ. ಅವರ ಡೋನ್ ಕಾರ್ಖಾನೆಯು ಶೇಕಡ 82ರಷ್ಟು ನಾಶವಾಗಿದೆ. ಅವರ ಕ್ಷಿಪಣಿ ತಯಾರಿಕಾ ಘಟಕಕ್ಕೂ ತೀವ್ರವಾಗಿ ಹಾನಿಯಾಗಿದ್ದು, ಶೇಕಡ 90ರಷ್ಟು ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ' ಎಂದು ಟ್ರಂಪ್ ವಿವರಿಸಿದ್ದಾರೆ.

'ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾವು ಅಳಿಸಿ ಹಾಕಿದ್ದೇವೆ. ಹೊರ್ಮುಜ್ ಜಲಸಂಧಿಯನ್ನು ನಾವು ತಡೆದಿದ್ದರಿಂದ ಇರಾನ್ ಆರ್ಥಿಕತೆಯೂ ತೀವ್ರವಾಗಿ ಕುಸಿದಿದೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries