ತೈಪೆ: ಅಮೆರಿಕದೊಂದಿಗಿನ ರಕ್ಷಣಾ ವ್ಯಾಪಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ತೈವಾನ್ ಉಪ ವಿದೇಶಾಂಗ ಸಚಿವ ಚೆನ್ ಮಿಂಗ್-ಚಿ ಅವರು ಶನಿವಾರ(ಮೇ 16) ಹೇಳಿದ್ದಾರೆ.
ತೈವಾನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವಾಗಲೂ ಸಿದ್ಧವಿರಬೇಕು.
ಹಾಗಾಗಿ ನಾವು ರಕ್ಷಣಾ ಒಪ್ಪಂದ ಮುಂದುವರಿಸುವ ಕುರಿತು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ತೈವಾನ್‌ನೊಂದಿಗಿನ ರಕ್ಷಣಾ ಒಪ್ಪಂದವನ್ನು ಮುಂದುವರಿಸುವ ಕುರಿತು ನಾವು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ(ಮೇ 15) ಹೇಳಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದರು. ಈ ವೇಳೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಮಾತುಕತೆಯಲ್ಲಿ ತೈವಾನ್ ವಿಷಯ ಪ್ರಸ್ತಾಪವಾಗಿರುವ ಸಾಧ್ಯತೆಯಿದೆ.

