ಬದಿಯಡ್ಕ: ಬಡಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿರಂತರ ತೊಡಗಿಕೊಂಡಿರುವ ಕಿಳಿಂಗಾರು ದಿ. ಸಾಯಿರಾಂ ಭಟ್ ಕುಟುಂಬದ ವತಿಯಿಂದ ಬುಧವಾರ ಬಡಜನತೆಗೆ ನೆರವನ್ನು ನೀಡಲಾಯಿತು. ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕುಲಪುರೋಹಿತರಾದ ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಮಣಿಮುಂಡ ಹಾಗೂ ವೇದಮೂರ್ತಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ನೆರವನ್ನು ಹಸ್ತಾಂತರಿಸಿದರು. ಫಲಾನುಭವಿಗಳಾದ ರಮೇಶ್ ಬೇರಿಕೆ ಅವರಿಗೆ ಚಿಕಿತ್ಸಾ ಧನಸಹಾಯ, ಭವ್ಯ ಬಾಂಜತ್ತಡ್ಕ, ರಾಜೀವಿ ಬೇಳ ಹಾಗೂ ನಾರಾಯಣ ಮಣಿಯಾಣಿ ಅವರಿಗೆ ಮನೆ ದುರಸ್ಥಿಗೆ ಮತ್ತು ಯಶೋಧ ಬೇಳ ಅವರಿಗೆ ವಿವಾಹ ಧನಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ., ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಸಂದೇಶ, ವೇಣುಗೋಪಾಲ ಕಿಳಿಂಗಾರು, ಸಂಜೀವ ರೈ ಮೊದಲಾದವರು ಉಪಸ್ಥಿತರಿದ್ದರು.

.jpg)
