ಮುಳ್ಳೇರಿಯ: ಬೇಕಲ ಪೆರಿಯ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಆಯೋಜಿಸಲಾಗಿರುವ ಮೂರನೇ ರಾಷ್ಟ್ರೀಯ ನೃತ್ಯೋತ್ಸವದಲ್ಲಿ, ಚೆನ್ನೈನ ಖ್ಯಾತ ನೃತ್ಯಗಾರ್ತಿ ಪ್ರಿಯಾ ಮುರ್ಲೆ ಮತ್ತು ತಂಡದವರು ಪ್ರಸ್ತುತಪಡಿಸಿದ 'ನವವಿಧ ಭಕ್ತಿ' ನೃತ್ಯ ರೂಪಕವು ಕಲಾಭಿಮಾನಿಗಳಿಗೆ ನವ್ಯ ಅನುಭೂತಿಯನ್ನು ನೀಡಿತು.
ಈ ನೃತ್ಯೋತ್ಸವದಲ್ಲಿ ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ಸಿಂಧು ಶ್ಯಾಮ್ ಅವರು ಭರತನಾಟ್ಯವನ್ನು ಪ್ರಸ್ತುತಪಡಿಸಿದರು. ಇವರ ನೃತ್ಯದ ನಯ ಮತ್ತು ಭಾವಾಭಿನಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಉದುಮ ಶಾಸಕ ನೀಲಕಂಠನ್ ಮತ್ತು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಗೋಶಾಲೆಗೆ ಭೇಟಿ ನೀಡಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಗೋಶಾಲೆಯ ಸಂಸ್ಥಾಪಕ ಹಾಗೂ ಪರಂಪರಾ ವಿದ್ಯಾಪೀಠದ ಆಚಾರ್ಯ ವಿಷ್ಣು ಹೆಬ್ಬಾರ್ ಅವರು ಶಾಸಕರು ಮತ್ತು ಸಂಸದರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

.jpg)
.jpg)
