HEALTH TIPS

ಇರಾನ್ ಜೊತೆಗಿನ ಯುದ್ಧ ಮುಗಿದಿಲ್ಲ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಜೆರುಸಲೇಂ: ಇರಾನ್‍ನ ಸಂವರ್ಧಿಸಿದ ಯುರೇನಿಯಂ ಅನ್ನು ತೆಗೆದುಹಾಕುವವರೆಗೆ ಮತ್ತು ಅದರ ಉಳಿದಿರುವ ಪರಮಾಣು ಮೂಲಸೌಕರ್ಯವನ್ನು ಕಿತ್ತುಹಾಕುವವರೆಗೆ ಇರಾನ್ ಒಳಗೊಂಡಿರುವ ಯುದ್ಧವು ಮುಗಿದಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್-ಅಮೆರಿಕ ಒಳಗೊಂಡ ಜಂಟಿ ಮಿಲಿಟರಿ ಕಾರ್ಯಾಚರಣೆಯ ಹೊರತಾಗಿಯೂ ಇರಾನ್ ಇನ್ನೂ ಸಂವರ್ಧಿತ ಯುರೇನಿಯಂ ದಾಸ್ತಾನು ಮತ್ತು ಯುರೇನಿಯಂ ಸಮೃದ್ಧಿಗೊಳಿಸುವಿಕೆಯ ಸೌಲಭ್ಯಗಳನ್ನು ಹೊಂದಿದೆ. ಅಲ್ಲಿ ಇನ್ನೂ ಪರಮಾಣು ವಸ್ತುಗಳು, ಸಂವರ್ಧಿಸಿದ ಯುರೇನಿಯಂ ಇರುವುದರಿಂದ ಯುದ್ಧ ಇನ್ನೂ ಮುಗಿದಿಲ್ಲ. ಅದನ್ನು ಮೊದಲು ಅಲ್ಲಿಂದ ಹೊರ ತೆಗೆಯಬೇಕಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಸಂಘರ್ಷದಲ್ಲಿ ಇಸ್ರೇಲ್‍ನ ವಿಶಾಲ ಉದ್ದೇಶಗಳನ್ನು ಇನ್ನೂ ಸಾಧಿಸಲಾಗಿಲ್ಲ. ಇರಾನ್‍ನ ಸಂವರ್ಧಿತ ಯುರೇನಿಯಂ ದಾಸ್ತಾನಿನ ಜೊತೆಗೆ ಇರಾನ್ ಬೆಂಬಲಿತ ಪ್ರಾದೇಶಿಕ ಸಶಸ್ತ್ರ ಹೋರಾಟಗಾರರ ಗುಂಪುಗಳ ನೆಟ್‍ವರ್ಕ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮಥ್ರ್ಯವು ಬೆದರಿಕೆಯಾಗಿಯೇ ಉಳಿದಿದೆ. ನಾವು ಅದನ್ನು ಬಹಳಷ್ಟು ಕಡಿಮೆ ಮಾಡಿದ್ದೇವೆ. ಆದರೆ ಇನ್ನೂ ಸಾಕಷ್ಟು ಉಳಿದಿವೆ ಮತ್ತು ಮಾಡಬೇಕಾದ ಕೆಲಸ ಬಹಳವಿದೆ. ಯುರೇನಿಯಂ ಅನ್ನು ತೆಗೆದುಹಾಕಲು ಮಾತುಕತೆಯ ಪ್ರಕ್ರಿಯೆಗೆ ಆದ್ಯತೆಯಿದೆ. ಯಾವುದಾದರೂ ರೀತಿಯಲ್ಲಿ ಯುರೇನಿಯಂ ಅನ್ನು ಇರಾನ್‍ನಿಂದ ಹೊರ ತರುವ ಕೆಲಸ ಅತ್ಯಂತ ಪ್ರಮುಖವಾಗಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries