ಆಯಂಡರ್‌ಸನ್‌ರ ಟೆನಿಸ್ ಬದುಕಿ ಹೊಲವೊಂದರ ಕೆಸರು ಮಣ್ಣಿನ ಅಂಗಳದಲ್ಲಿ ಆರಂಭಗೊಂಡಿತು ಹಾಗೂ ಅವರು ಅಂತಿಮವಾಗಿ ಆಸ್ಟ್ರೇಲಿಯದ ಟೆನಿಸ್ ದಿಗ್ಗಜರಾದರು.
ಅವರು 1957ರಲ್ಲಿ ಯುಎಸ್ ಓಪನ್ ಮತ್ತು ಮೂರು ಗ್ರ್ಯಾನ್ ಸ್ಲಾಮ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದರು.
1957ರ ಆಗಿನ ಯುನೈಟೆಡ್ ಸ್ಟೇಟ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಅವರು ಶ್ರೇಯಾಂಕರಹಿತರಾಗಿದ್ದರೂ, ಆಯಂಡರ್‌ಸನ್ ಮೂವರು ಶ್ರೇಯಾಂಕಿತ ಆಟಗಾರರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಆ ಪಂದ್ಯಾವಳಿಯಲ್ಲಿ ಅವರು ಕೇವಲ ಎರಡು ಸೆಟ್‌ಗಳನ್ನು ಕಳೆದುಕೊಂಡಿದ್ದರು. ಅವರು ಎರಡು ಬಾರಿ ಡೇವಿಸ್ ಕಪ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ನಿವೃತ್ತಿಯ ಬಳಿಕ, ಆಯಂಡರ್‌ಸನ್ ಅವರು ಪ್ಯಾಟ್ ರ್ಯಾಫ್ಟರ್ ಸೇರಿದಂತೆ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದರು. ರ್ಯಾಫ್ಟರ್ ಬಳಿಕ ವಿಶ್ವ ನಂಬರ್ ವನ್ ಆದರು.

