HEALTH TIPS

ಪೆಟ್ರೋಲಿಯಂ, ಅನಿಲ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ಅಂಗಸಂಸ್ಥೆ ಪೆಟ್ರೋಲಿಯಂ ಮತ್ತು ಅನಿಲ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡಿನಲ್ಲಿ ಜರುಗಿತು.  ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಲೌತ್ ಸಮಾರಂಭ ಉದ್ಘಾಟಿಸಿದರು. ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರತೀಶ್ ಕೂಡ್ಲು ಸಭೆಯ ಅಧ್ಯಕ್ಷತೆ ವಹಿಸಿದ್ದರು. 


ಸಮ್ಮೇಳನದಲ್ಲಿ ಮಾತನಾಡಿದ ಫೆಡರೇಶನ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಲೋತ್ ಮುಖ್ಯ ಭಾಷಣ ಮಾಡಿ,  ರಾಜ್ಯದಲ್ಲಿ ಪೆಟ್ರೋಲಿಯಂ ಮತ್ತು ಅನಿಲ ವಲಯದ ಲಾರಿ ಕಾರ್ಮಿಕರಿಗೆ ಅಸ್ತಿತ್ವದಲ್ಲಿರುವ ಒಪ್ಪಂದದ ಪ್ರಕಾರ ವೇತನ ಕಾಸರಗೋಡು ಜಿಲ್ಲೆಯಲ್ಲಿ ಲಭ್ಯವಾಗದಿರುವುದು ವಿಷಾದನೀಯ.   ಒಪ್ಪಂದದ ಪ್ರಕಾರ ವೇತನ ಮತ್ತು ಇತರ ಸವಲತ್ತುಗಳನ್ನು ಕಾರ್ಮಿಕರಿಗೆ ಶೀಘ್ರ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಕೇರಳದ ಹಲವು ಭಾಗಗಳಲ್ಲಿ 21ಸಾವಿರಕ್ಕಿಂತ ಹೆಚ್ಚು ವೇತನ ಕಂಪೆನಿಗಳು ಪಾವತಿಸುತ್ತಿದ್ದು, ಉಳಿದ ಪೆಟ್ರೋಲ್ ಪಂಪ್‍ಗಳೂ ಏಕರೀತಿಯ ವೇತನ ಜಾರಿಗೆ ತರಬೇಕು ಎಂದೂ ಅವರು ತಿಳಿಸಿದರು. "ಸಮಾನ ಕೆಲಸಕ್ಕೆ ಸಮಾನ ವೇತನ" ಎಂಬ ಹೊಸ ಪರಿಕಲ್ಪನೆ.ಪುರುಷ ಮತ್ತು ಮಹಿಳಾ ಭೇದವಿಲ್ಲದೆ ಎಲ್ಲಾ ಕಾರ್ಮಿಕರಿಗೂ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಬೇಕೆಂದು ಅವರು ಒತ್ತಾಯಿಸಿದರು.   

ಚಟುವಟಿಕೆ, ವರದಿ, ಆದಾಯ ಮತ್ತು ವೆಚ್ಚದ ಅಂಕಿಅಂಶಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ದಿನೇಶ್ ಪಿ. ಬಂಬ್ರಾಣ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭ ನೂತನ  ಪದಾಧಿಕಾರಿಗಳ ಘೋಷಿಸಲಾಯಿತು. ಕೆ.ವಿ.ಬಾಬು ಅಧ್ಯಕ್ಷ, ಬಿಜು ಎಚ್.ಪಿ.ಮಂಗಳೂರು, ಶ್ರೀಜಿತ್ ಎಂ.ಆರ್.ಪಿ.ಎಲ್, ಟಿ.ಸುಕುಮಾರ ರಾವ್ ಉಪಾಧ್ಯಕ್ಷರು, ರಂಜಿತ್ ಮಾವುಂಗಾಲ್ ಜತೆ ಕಾರ್ಯದರ್ಶಿ,  ಜಯೇಶ್ ಪಾರೆಕಟ್ಟ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು. ಶ್ರೀಧರ ಚೆನಕೋಡ್ ಸ್ವಾಗತಿಸಿದರು.  ಜಯೇಶ್ ಒಪಾರೆಕಟ್ಟ ವಂದಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries