HEALTH TIPS

ಆಧಿಕಾರದ ಮದದಲ್ಲಿ ನಾಡಿನ ಶಾಂತಿಯುತ ವಾತಾವರಣ ಹಾಳುಮಾಡಲು ಲೀಗ್ ಪ್ರಯತ್ನ-ಎಂ.ಎಲ್. ಅಶ್ವಿನಿ

ಕಾಸರಗೋಡು: ಅಧಿಕಾರದ ದರ್ಪದಿಂದ ಸಮಾಜದ ಶಾಂತಿ, ಸೌಹರ್ದತೆಗೆ ಧಕ್ಕೆ ತಂದೊಡ್ಡುವ ತನ್ನ ಕಾರ್ಯಕರ್ತರ ಕಿಡಿಗೇಡಿ ಕೃತ್ಯಗಳನ್ನು ನಿಯಂತ್ರಿಸಲು ಮುಸ್ಲಿಂಲೀಗ್ ಮುಖಂಡರು ಮುಂದಾಗಬೇಕು ಎಂದು   ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. 


ಹತ್ತು ವರ್ಷಗಳ ನಂತರ ಅಧಿಕಾರಕ್ಕೇರುತ್ತಿರುವ ಐಕ್ಯರಂಗ ಮಿತ್ರಪಕ್ಷ ಮುಸ್ಲಿಂಲೀಗ್ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ನಾಡಿನ ಸೌಹಾರ್ದ ವಾತಾವರಣ ಹಾಳು ಮಾಡಲು ಪ್ರಯತ್ನಿಸುತ್ತಿರುವುದು ಖಂಡನೀಯ. ಮತ ಎಣಿಕೆಯ ದಿನದಂದು ಮುಸ್ಲಿಂ ಲೀಗ್ ಕಾರ್ಯಕರ್ತರು ಪೂಚಕ್ಕಾಡ್ ಸನಿಹದ ರಾಮನಗರದ ಬಸ್ ನಿಲ್ದಾಣಕ್ಕೆ ಹಾನಿಯೆಸಗಿ,  ಅಲ್ಲಿ ಬಾಟಲಿಗಳು ಮತ್ತು ಟೈಲ್ಸ್‍ಗಳನ್ನು ಸುರಿಯುವ ಮೂಲಕ ವ್ಯಾಪಕ ದಾಂಧಲೆಯಲ್ಲಿ ತೊಡಗಿಸಿಕೊಂಡಿದ್ದರು.  ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀಕಾನದಲ್ಲಿ ಹಾನಿಯೆಸಗಲಾದ ಅಂಗನವಾಡಿ ಬಾವಿ ಸನಿಹ ಅಶ್ವಿನಿ ಭೇಟಿ ನೀಡಿದರು. ಈ ಸಂದರ್ಭ ಲೀಗ್ ಕಾರ್ಯಕರ್ತರು ನಾಶಪಡಿಸಿದ ಬಿಜೆಪಿ ಧ್ವಜದ ಬದಲಿಗೆ ಅಶ್ವಿನಿ ನೇತೃತ್ವದಲ್ಲಿ ಹೊಸ ಧ್ವಜವನ್ನು ಅಳವಡಿಸಲಾಯಿತು.

ಮುಸ್ಲಿಂಲೀಗ್ ಕಾರ್ಯಕರ್ತರು ಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳ ಮೇಲೂ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳಲು ಸಿದ್ಧರಾಗಬೇಕು ಎಂದು ಅಶ್ವಿನಿ ಒತ್ತಾಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries