ಮಂಜೇಶ್ವರ: ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನಂ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬರವರ ಜನ್ಮಶತಾಬ್ಧಿ ಸಂದರ್ಭದಲ್ಲಿ ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದ ನೂತನ ಕಟ್ಟಡವಾದ ಸಾಕೇತವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶುಕ್ರವಾರ ಬೆಳಗ್ಗಿನ ಶುಭಮುಹೂರ್ತದಲ್ಲಿ ಲೋಕಾರ್ಪಣೆಗೊಳಿಸಿದರು. ಬಳಿಕ ಹಮ್ಮಿಕೊಳ್ಳಲಾಗಿದ್ದ ಸಭಾಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿ, ನಡೆಯುವ ಸೇವಾಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸಿಕೊಳ್ಳಬೇಕು ಎಂದರು.
ಭಟ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಪುತ್ತೂರು ನವಚೇತನ ಹಿರಿಯರ ಬಡಾವಣೆಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ.ಶ್ಯಾಮ್ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಡಾ.ಶಶಿಧರ ಬೈಕುಂಜೆ, ಡಾ.ವಿದ್ಯಾ ಉಪಾಧ್ಯಾಯ, ವೇ.ಮೂ. ಬೋಳಂತಕೋಡಿ ರಾಮ ಭಟ್, ಬಿ.ಎಸ್.ರಾಜ, ಡಾ.ಟಿ.ಶ್ಯಾಮ ಭಟ್, ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೃಷ್ಣರಾಜ್ ಶರ್ಮಾ, ಗಿಳಿಯಾಲು ಜಯರಾಮ ಭಟ್, ಡಾ.ಎಂ.ಆರ್. ಮೋಹನ್ ಕುಮಾರ್ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಡುಗೈದಾನಿ, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ, ರೆ.ಫಾ. ಬೇಸಿಲ್ ವಾಸ್ ವರ್ಕಾಡಿ, ಡಾ. ವಿಕ್ರಂ ಶೆಟ್ಟಿ, ನರಸಿಂಗರಾವ್ ಕಾಸರಗೋಡು, ಉಮ್ಮರ್ ಬೋರ್ಕಳ, ಎನ್.ಅಲಿ ಅಬ್ದುಲ್ಲ ಮುಂತಾದವರು ಪಾಲ್ಗೊಂಡಿದ್ದರು. ದೈಗೋಳಿ ಆಶ್ರಮದ ಸಂಸ್ಥಾಪಕ ಡಾ.ಉದಯಕುಮಾರ್ ನೂಜಿ ದಂಪತಿ ಮತ್ತಿತರರಿದ್ದರು.
ಯಕ್ಷಗಾನ ಪ್ರದರ್ಶನ:
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೀಪ ಪ್ರಜ್ವಲನ, ಭಕ್ತಿಭಾವರಾಗ ಸಂಗಮ, ಅಪರಾಹ್ನ ಭರತನಾಟ್ಯ ಪ್ರದರ್ಶನ, ಪುಣ್ಯಕೋಟಿ ಯಕ್ಷಗಾನ ಪ್ರದರ್ಶನಗೊಂಡಿತು.

.jpg)
.jpg)
