HEALTH TIPS

ವಿದೇಶಿಗಳಿಗಿಂತ ಭಾರತದಲ್ಲೇ ಕಡಿಮೆ ಏರಿಕೆ; ಇಂಧನ ಬೆಲೆ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಕಿರಣ್ ರಿಜಿಜು

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಹೊರ್ಮುಜ್ ಜಲಸಂಧಿ ನಿರ್ಬಂಧದಿಂದಾದ ತೈಲ ಬಿಕ್ಕಟ್ಟಿನ ಹಿನ್ನೆಲೆ ಶುಕ್ರವಾರ(ಮೇ 15) ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ ತಲಾ 3 ರೂ. ಹೆಚ್ಚಿಸಿದ್ದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, 20% ರಿಂದ ಸುಮಾರು 100% ವರೆಗಿನ ಏರಿಕೆಯನ್ನು ಕಂಡ ವಿದೇಶಗಳಿಗೆ ಹೋಲಿಸಿದರೆ ನಮ್ಮದು ಕಡಿಮೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪಶ್ಚಿಮ ಏಷ್ಯಾ ಸಂಘರ್ಷದ ಬಳಿಕ ಜಗತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ಎದುರಿಸುತ್ತಿದ್ದಾಗ, ಭಾರತವು ಪ್ರತ್ಯೇಕವಾಗಿ ನಿಂತಿತು. ಹಲವಾರು ದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 20% ರಿಂದ ಸುಮಾರು 100% ವರೆಗಿನ ಏರಿಕೆಯನ್ನು ಕಂಡರೆ, ಭಾರತವು ಪೆಟ್ರೋಲ್‌ಗೆ ಕೇವಲ +3.2% ಮತ್ತು ಡೀಸೆಲ್‌ಗೆ +3.4% ಗೆ ಹೆಚ್ಚಳವನ್ನು ಸೀಮಿತಗೊಳಿಸಿದೆ ಎಂದಿದ್ದಾರೆ.
ಮುಂದುವರೆದು, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ $100 ದಾಟಿದರೂ ಮತ್ತು ಜಾಗತಿಕ ಮಾರುಕಟ್ಟೆಗಳು ಅಸ್ಥಿರವಾಗಿದ್ದರೂ ಸಹ, ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ನಾಗರಿಕರನ್ನು ಹಣದುಬ್ಬರ ಮತ್ತು ಆರ್ಥಿಕ ಒತ್ತಡದಿಂದ ರಕ್ಷಿಸಲು ವಾರಗಳವರೆಗೆ ಭಾರಿ ನಷ್ಟವನ್ನು ಭರಿಸಿಕೊಂಡಿವೆ. ಇದು ಜವಾಬ್ದಾರಿಯ ಆಡಳಿತ. ಜನ ಮೊದಲು ಎಂಬ ನಾಯಕತ್ವ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಆರ್ಥಿಕ ಸ್ಥಿರತೆಯನ್ನು ಸಾರ್ವಜನಿಕ ಕಲ್ಯಾಣದೊಂದಿಗೆ ಸಮತೋಲನಗೊಳಿಸುವುದನ್ನು ಮುಂದುವರೆಸಿದೆ ಎಂದಿದ್ದಾರೆ.

ಅಂಕಿಅಂಶಗಳ ಪ್ರಕಾರ, ಮಲೇಷ್ಯಾ ಪೆಟ್ರೋಲ್ ಬೆಲೆಯಲ್ಲಿ 89.7% ಹೆಚ್ಚಳ ಮತ್ತು ಡೀಸೆಲ್ ಬೆಲೆಯಲ್ಲಿ 112.7% ಹೆಚ್ಚಳವನ್ನು ದಾಖಲಿಸಿದೆ. ಅಮೆರಿಕದಲ್ಲಿ ಪೆಟ್ರೋಲ್ ಬೆಲೆಯಲ್ಲಿ 44% ಮತ್ತು ಡೀಸೆಲ್ 48.1% ಏರಿಕೆಯಾಗಿದೆ. ಅದೇ ರೀತಿ ಚೀನಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ 21.7% ಮತ್ತು ಡೀಸೆಲ್ ಬೆಲೆಯಲ್ಲಿ 23.7% ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಇಂದು ಮುಂಜಾನೆ ತೈಲ ಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಣೆ ಮಾಡಿದ್ದು, ಪರಿಷ್ಕರಣೆಯ ಬಳಿಕ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77ಯಿಂದ 97.77 ರೂಪಾಯಿಗೆ ಏರಿಕೆಯಾದರೆ, ಡೀಸೆಲ್ ದರ ಲೀಟರ್‌ಗೆ 87.67ರಿಂದ 90.67 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್‌ಗೆ 108.74 ರೂ., ಮುಂಬೈನಲ್ಲಿ 106.68 ರೂ. ಹಾಗೂ ಚೆನ್ನೈನಲ್ಲಿ 103.67 ರೂ. ತಲುಪಿದ್ದು, ಪ್ರತಿ ಲೀಟರ್‌ಗೆ 2.83 ರಿಂದ 3.29 ರೂ.ಗಳವರೆಗೆ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ ಡೀಸೆಲ್​ ಲೀಟರ್‌ಗೆ 95.13 ರೂ., ಮುಂಬೈನಲ್ಲಿ 93.14 ರೂ. ಮತ್ತು ಚೆನ್ನೈನಲ್ಲಿ 95.25 ರೂ.ಗೆ ಏರಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries