ಟೆಹರಾನ್ (AFP): ಇರಾನ್ ಧ್ವಜ ಹೊಂದಿದ್ದ ಎರಡು ಟ್ಯಾಂಕರ್‌ಗಳ ಮೇಲೆ ಅಮೆರಿಕ ಗುಂಡಿನ ದಾಳಿ ನಡೆಸಿದೆ.
ಕದನ ವಿರಾಮ ಉಲ್ಲಂಘಿಸಿ ಅಮೆರಿಕ ದಾಳಿ ನಡೆಸಿದ್ದು, ಪ್ರತ್ಯುತ್ತರ ನೀಡಿದ್ದೇವೆ ಎಂದು ಇರಾನ್ ಸೇನಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಶುಕ್ರವಾರ ಘರ್ಷಣೆ ನಡೆದಿದೆ. ನಂತರ ಉದ್ವಿಗ್ನ ಸ್ಥಿತಿ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಇರಾನ್ ತೈಲ ಮಾರ್ಗವನ್ನು ನಿಯಂತ್ರಿಸುವುದು ಸ್ವೀಕಾರಾರ್ಹವಲ್ಲ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ಪುನರುಚ್ಚರಿಸಿದ್ದಾರೆ.'
ಕತಾರ್ ಪ್ರಧಾನಿ ಭೇಟಿ: ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ರೆಹಮಾನ್ ಅಲ್ ಥಾನಿ ಅವರು ವಾಷಿಂಗ್ಟನ್‌ನಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾಗಿ, ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಶುಕ್ರವಾರ ಚರ್ಚಿಸಿದರು.

