HEALTH TIPS

ಮನೆಗೆ ವಾಲಿಕೊಂಡಿರುವ ವಿದ್ಯುತ್ ಕಂಬ, ತಂತಿ: ಕೃಷ್ಣನಗರದಲ್ಲಿ ಆತಂಕ

ಉಪ್ಪಳ: ಕೃಷ್ಣನಗರ ಎಸ್.ಸಿ ಉನ್ನತಿ(ಕಾಲನಿ)ಯಲ್ಲಿ ಮನೆಗಳಿಗೆ ವಿದ್ಯುತ್ ಕಂಬ ಹಾಗೂ ತಂತಿ ವಾಲಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯ ಎಸ್.ಸಿ ಉನ್ನತಿಯಲ್ಲಿ ವಿದ್ಯುತ್ ಕಂಬಗಳು ಆತಂಕ ಸೃಷ್ಟಿsಸಿವೆ. ಇಲ್ಲಿನ ಕುಸುಮ ಎಂಬವರ ಮನೆ ಬಳಿಯಲ್ಲಿರುವ ವಾಲಿಕೊಂಡ ವಿದ್ಯುತ್ ಕಂಬ ಯಾವುದೇ ಕ್ಷಣ ಮನೆ ಮೇಲೆ ಬೀಳುವ ಆತಂಕವಿದೆ. ಇನ್ನೊಂದು ಕಂಬ ಅಶೋಕ ಎಂಬವರ ಮನೆಯ ಹತ್ತಿರದಲ್ಲೇ ಇದ್ದು ಈ ಪರಿಸರದಿಂದ ಹಾದು ಹೋದ ತಂತಿ ಮನೆಯ ಮೇಲ್ಭಾಗಕ್ಕೆ ಹಾಗೂ ತೆಂಗಿನ ಮರಕ್ಕೂ ಸ್ಪರ್ಶಿಸುತ್ತಿದೆ. ಮರದ ಗೆಲ್ಲು ತಾಗಿ ಪದೇ ಪದೇ ವಿದ್ಯುತ್ ಮೊಟಕುಗೊಳ್ಳುತ್ತಿದ್ದು, ಈ ಪರಿಸರದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ವಿದ್ಯುತ್ ಕಂಬವನ್ನು ಬದಲಾಯಿಸಲು ಸ್ಥಳೀಯರು ಉಪ್ಪಳ ವಿದ್ಯುತ್ ಸೆಕ್ಷನ್‍ಗೆ ದೂರು ನೀಡಿದರೂ ಕ್ರಮಕೈ ಮುಂದಾಗಲಿಲ್ಲವೆಂದು ನಿವಾಸಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಳೆಗಾಲದ ಮೊದಲೇ ದುರಸ್ತಿ ಗೊಳಿಸಿ ಸಂಭವಿಸುವ ಅಪಾಯವನ್ನು ತಪ್ಪಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries