ಹೊಸ ದರ ಮೇ 26ರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ.
ಇದರೊಂದಿಗೆ ದಿಲ್ಲಿಯಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 83.9ರೂ.ಗೆ ಏರಿಕೆಯಾಗಿದೆ. ಮಂಗಳೂರಿನ ಸ್ಥಳೀಯ ಪಂಪ್ ಗಳಲ್ಲಿ ಒಂದು ಕೆ ಜಿ CNGಗೆ 92 ರೂಪಾಯಿ ದರವಿದೆ.
ಇದಕ್ಕೂ ಮೊದಲು ಮೇ 15ರಂದು ಪ್ರತಿ ಕೆಜಿಗೆ 2ರೂ. ಹೆಚ್ಚಿಸಲಾಗಿತ್ತು. ನಂತರ ಶುಕ್ರವಾರ 1ರೂ. ಹಾಗೂ ರವಿವಾರ ಮತ್ತೆ 1ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 2ರೂ. ಹೆಚ್ಚಳ ಮಾಡಿರುವುದರಿಂದ ಮೇ 15ರಿಂದ ಇದುವರೆಗೆ ಒಟ್ಟು 7 ರೂ. ಏರಿಕೆಯಾಗಿದೆ.
ಕಳೆದ 9 ದಿನಗಳಲ್ಲಿ ಇದು ಮೂರನೇ ದರ ಏರಿಕೆಯಾಗಿದ್ದು, 11 ದಿನಗಳಲ್ಲಿ ನಾಲ್ಕನೇ ಹೆಚ್ಚಳವಾಗಿದೆ.
ಜಾಗತಿಕ ಕಚ್ಚಾ ತೈಲ ದರ ಏರಿಕೆಯಿಂದ ತೈಲ ಮಾರುಕಟ್ಟೆ ಕಂಪೆನಿಗಳ ಮೇಲೆ ಒತ್ತಡ ಹೆಚ್ಚಾಗಿದೆ. ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಝ್ ಜಲಸಂಧಿಯಲ್ಲಿ ಅಡಚಣೆ ಉಂಟಾಗುವ ಭೀತಿ ತಲೆದೋರಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.

