ಚಂಡೀಗಢ: ಜಾರಿ ನಿರ್ದೇಶನಾಲಯ (ಇಆ) ಗುರುವಾರ ಚಂಡೀಗಢ ಮತ್ತು ಮೊಹಾಲಿಯ ವಿವಿಧ ಸ್ಥಳಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಮೊಹಾಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ನಗದು ತುಂಬಿದ ಚೀಲಗಳನ್ನು ಮೇಲ್ಮಹಡಿಯಿಂದ ಕೆಳಗೆ ಎಸೆಯಲಾದ ಘಟನೆ ನಡೆದಿದೆ.
ಪ್ರಮುಖ ಬಿಲ್ಡರ್ ಗಳಿಗೆ ಸಂಬಂಧಿಸಿದ ಸುಮಾರು ಒಂದು ಡಝನ್ ಸ್ಥಳಗಳಲ್ಲಿ ಇಆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು.
ಈ ವೇಳೆ ಮೊಹಾಲಿಯ ಕಟ್ಟಡವೊಂದರ 9ನೇ ಮಹಡಿಯಿಂದ 500 ರೂ. ಮುಖಬೆಲೆಯ ನೋಟುಗಳಿಂದ ತುಂಬಿದ್ದ ಎರಡು ಚೀಲಗಳನ್ನು ಕೆಳಗೆ ಎಸೆಯಲಾಗಿದೆ ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ ಕಟ್ಟಡದ ಮೇಲ್ಭಾಗದಿಂದ ನೋಟುಗಳ ಕಟ್ಟುಗಳು ಕೆಳಗೆ ಬೀಳುತ್ತಿರುವುದು ಕಂಡುಬಂದಿತು. ಘಟನಾ ಸ್ಥಳದ ವಿಡಿಯೊಗಳಲ್ಲಿ ನೆಲದ ಮೇಲೆ ಬಿದ್ದಿದ್ದ ಎರಡು ಚೀಲಗಳು ಹಾಗೂ ಸುತ್ತಮುತ್ತ ಚದುರಿಕೊಂಡಿದ್ದ 500 ರೂ. ವಿನ ನೋಟುಗಳ ಬಂಡಲ್‌ಗಳು ಗೋಚರಿಸಿವೆ.
ಪ್ರಾಥಮಿಕ ಮಾಹಿತಿಯಂತೆ, ಸ್ಥಳದಿಂದ ಸುಮಾರು 25 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಗ್ರೇಟರ್ ಮೊಹಾಲಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಉಒಂಆಂ) ವತಿಯಿಂದ ಭೂ ಬಳಕೆ ಬದಲಾವಣೆ (ಅಐU) ಪರವಾನಗಿಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಆರ್ಥಿಕ ಅಕ್ರಮ ಮತ್ತು ಸಾರ್ವಜನಿಕರಿಗೆ ನೂರಾರು ಕೋಟಿ ರೂಪಾಯಿ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ಇಆ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ತನಿಖಾ ಸಂಸ್ಥೆಗೆ ಬಂದ ದೂರುಗಳ ಆಧಾರದ ಮೇಲೆ ದಾಳಿ ಆರಂಭಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಣಕಾಸು ವ್ಯವಹಾರಗಳ ಮಾಹಿತಿ ಹಾಗೂ ಶಂಕಿತ ಅಕ್ರಮ ವಹಿವಾಟುಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

