ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಸಮೀಕರಣಗಳ ಬದಲಾವಣೆಯ ನಡುವಲ್ಲಿ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಪ್ರಮುಖ ಅಜೆಂಡಾವಾಗಿ ಇಂಧನ ಭದ್ರತೆ ಹೊರಹೊಮ್ಮಲಿದೆ. ಈ ವೇಳೆ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ನೆದರ್‌ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಯನ್ನು ಒಳಗೊಂಡ ನಾಲ್ಕು ರಾಷ್ಟ್ರಗಳ ಯುರೋಪ್ ಪ್ರವಾಸಕ್ಕೆ ಪ್ರಧಾನಿ ಮೋದಿಯವರು ತೆರಳುವ ಮಾರ್ಗ ಮಧ್ಯೆ ನಡೆಯುವ ಯುಎಇಯ ಮೂರು ಗಂಟೆಗಳ ಭೇಟಿಯ ವೇಳೆ, ಭಾರತ ಮತ್ತು ಯುಎಇ ದ್ರವೀಕೃತ ಪೆಟ್ರೋಲಿಯಂ ಅನಿಲ (ಐPಉ) ಪೂರೈಕೆ ಹಾಗೂ ತಂತ್ರಾತ್ಮಕ ಪೆಟ್ರೋಲಿಯಂ ಸಂಗ್ರಹಗಳಿಗೆ ಸಂಬಂಧಿಸಿದ ಎರಡು ಮಹತ್ವದ ಒಪ್ಪಂದ ಪತ್ರಗಳಿಗೆ ಸಹಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಹೆಚ್ಚುತ್ತಿರುವ ಹಾಗೂ ಪೂರೈಕೆ ವೈವಿಧ್ಯೀಕರಣದ ಅಗತ್ಯತೆ ಮತ್ತೊಮ್ಮೆ ಗಮನ ಸೆಳೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ನಡೆಯುತ್ತಿದೆ. ಈ ಒಪ್ಪಂದಗಳ ಉದ್ದೇಶ, ಭಾರತದ ದೀರ್ಘಕಾಲೀನ ಇಂಧನ ಸ್ಥಿರತೆಯನ್ನು ಬಲಪಡಿಸುವುದರ ಜೊತೆಗೆ, ಭಾರತದ ವಿಶ್ವಾಸಾರ್ಹ ಇಂಧನ ಪಾಲುದಾರರಲ್ಲೊಬ್ಬರಾಗಿ ಯುಎಇಯ ಪಾತ್ರವನ್ನು ಮತ್ತಷ್ಟು ವಿಸ್ತರಿಸುವುದಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಸ್ತುತ ಯುಎಇ ಭಾರತಕ್ಕೆ ಅಗತ್ಯವಿರುವ ಎಲ್ ಪಿಜಿಯ ಸುಮಾರು 40 ಶೇಕಡಾವನ್ನು ಪೂರೈಸುತ್ತಿದ್ದು, ದೇಶದ ಅತಿದೊಡ್ಡ ಎಲ್ ಪಿಜಿ ಪೂರೈಕೆದಾರವಾಗಿದೆ. ಕಳೆದ ವರ್ಷ ಯುಎಇ ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ನಾಲ್ಕನೇ ಅತಿದೊಡ್ಡ ಮೂಲವಾಗಿದ್ದು, ಒಟ್ಟು ಆಮದುಗಳಲ್ಲಿ ಸುಮಾರು 11 ಶೇಕಡಾ ಪಾಲು ಹೊಂದಿತ್ತು. ಜೊತೆಗೆ, ಎಲ್ ಎನ್ ಜಿ ಪೂರೈಕೆಯಲ್ಲಿ ಮೂರನೇ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿ ಉಳಿದಿದೆ.
ಭಾರತೀಯ ಕಂಪನಿಗಳು ಹಾಗೂ ಂಆಓಔಅ ಉಚಿs ನಡುವೆ ಒಟ್ಟು 4.5 ಒಒಖಿPಂ ಐಓಉ ಪೂರೈಕೆಗೆ ದೀರ್ಘಕಾಲೀನ ಒಪ್ಪಂದಗಳು ಸಹಿಯಾಗಿದ್ದು, ಯುಎಇ ಮೂಲದ ಎಲ್ ಎನ್ ಜಿಯ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಎರಡು ದೇಶಗಳು ಭಾರತದ ತಂತ್ರಾತ್ಮಕ ಪೆಟ್ರೋಲಿಯಂ ಸಂಗ್ರಹಗಳ ಕುರಿತ ಸಹಕಾರವನ್ನೂ ಪರಿಶೀಲಿಸುವ ನಿರೀಕ್ಷೆಯಿದೆ. 2018ರಲ್ಲಿ ಭಾರತೀಯ ತಂತ್ರಾತ್ಮಕ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಮತ್ತು ಅಬುದಾಬಿ ರಾಷ್ಟ್ರೀಯ ತೈಲ ಕಂಪೆನಿ ನಡುವೆ ಒಪ್ಪಂದವಾಗಿದ್ದು, ಯುಎಇಗೆ ಮಂಗಳೂರು ಸಂಗ್ರಹಣಾ ಕೇಂದ್ರದಲ್ಲಿ ಐದು ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು. ಇಂತಹ ವ್ಯವಸ್ಥೆಯನ್ನು ಭಾರತ ಯಾವುದೇ ದೇಶದೊಂದಿಗೆ ಮೊಟ್ಟಮೊದಲ ಬಾರಿಗೆ ಮಾಡಿಕೊಂಡಿತ್ತು.
ಇಂಧನ ಸಹಕಾರವು ಕ್ರಮೇಣ ಮೇಲ್ದರ್ಜೆ ಹೂಡಿಕೆಗಳು ಹಾಗೂ ಶುದ್ಧ ಇಂಧನ ಸಹಭಾಗಿತ್ವವನ್ನು ಒಳಗೊಂಡ ವಿಶಾಲ ತಂತ್ರಾತ್ಮಕ ಸಹಕಾರವಾಗಿ ಬೆಳೆದಿದೆ. 2018ರಲ್ಲಿ ಭಾರತೀಯ ಕಂಪನಿಗಳ ಒಕ್ಕೂಟವಾದ ಔಗಿಐ, ಃPಖಐ ಮತ್ತು Iಔಅಐ ಅಬುಧಾಬಿಯ ಐoತಿeಡಿ Zಚಿಞum ಸಮುದ್ರ ತೈಲ ಕ್ಷೇತ್ರದಲ್ಲಿ 10 ಶೇಕಡಾ ಪಾಲನ್ನು ಪಡೆದುಕೊಂಡಿತ್ತು.
ಮುಂದಿನ ವರ್ಷ ಃPಖಐ ಮತ್ತು Iಔಅಐ ಸಂಯುಕ್ತ ಸಂಸ್ಥೆಯಾದ ಉರ್ಜ ಭಾರತ್ ಪ್ರೈವೆಟ್ ಲಿಮಿಟೆಡ್, ಅಬು ದಾಬಿ ಸಾಗರ ಬ್ಲಾಕ್-1 ರಲ್ಲಿ ಪಾಲು ಪಡೆದಿತ್ತು. ಈ ವರ್ಷದ ಜನವರಿಯಲ್ಲಿ ಬಿಪಿಆರ್ ಎಲ್ ಈ ಕ್ಷೇತ್ರದಲ್ಲಿ ತೈಲ ಪತ್ತೆಯಾಗಿದೆ ಎಂದು ಘೋಷಿಸಿತು. ಇದು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರತದ ಮೊದಲ ಯಶಸ್ವಿ ಮೇಲ್ದರ್ಜೆ ಹೂಡಿಕೆಗಳಲ್ಲಿ ಒಂದಾಗಿದೆ.
ಭಾರತ ಮತ್ತು ಯುಎಇ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಯೂ ಸಹಕಾರವನ್ನು ವೇಗಗೊಳಿಸುತ್ತಿವೆ. ಯುಎಇಯ ಶುದ್ಧ ಇಂಧನ ಸಂಸ್ಥೆ ಮಸ್ಡಾರ್ 2024ರ ಅಕ್ಟೋಬರ್‌ನಲ್ಲಿ ರಾಜಸ್ಥಾನ ಸರ್ಕಾರದೊಂದಿಗೆ 60 ಗಿಗಾವಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿತ್ತು. ಜೊತೆಗೆ, ಎರಡು ದೇಶಗಳು ವಿದ್ಯುತ್ ಗ್ರೀಡ್ ಪರಸ್ಪರ ಸಂಪರ್ಕ ಸಾಧ್ಯತೆಯನ್ನೂ ಪರಿಶೀಲಿಸುತ್ತಿವೆ.
ಇಂಧನ ಕ್ಷೇತ್ರದ ಹೊರತಾಗಿ, ಮೋದಿ ಅವರ ಭೇಟಿಯ ವೇಳೆ ವ್ಯಾಪಾರ, ಹೂಡಿಕೆ ಮತ್ತು ಯುಎಇಯಲ್ಲಿ ವಾಸಿಸುವ ಸುಮಾರು 45 ಲಕ್ಷ ಭಾರತೀಯರ ಕಲ್ಯಾಣ ಕುರಿತ ಚರ್ಚೆಗಳೂ ನಡೆಯುವ ನಿರೀಕ್ಷೆಯಿದೆ.
ಯುಎಇ ಭೇಟಿ ಮೋದಿ ಅವರ ಐದು ರಾಷ್ಟ್ರಗಳ ಪ್ರವಾಸಕ್ಕೆ ಚಾಲನೆ ನೀಡಲಿದ್ದು, ನಂತರದ ಯುರೋಪ್ ಮತ್ತು ನಾರ್ಡಿಕ್ ರಾಷ್ಟ್ರಗಳ ಭೇಟಿಗಳಲ್ಲಿ ಭಾರತ-ಯುರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದ ಹಿನ್ನೆಲೆ ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸುವುದಕ್ಕೆ ಒತ್ತು ನೀಡಲಾಗುತ್ತದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್ ಅವರ ಪ್ರಕಾರ, ಈ ಭೇಟಿ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ವ್ಯಾಪಾರ ಸಹಭಾಗಿತ್ವ, ಸೆಮಿಕಂಡಕ್ಟರ್ ತಂತ್ರಜ್ಞಾನ ಹಾಗೂ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸಂಪರ್ಕ ಯೋಜನೆಗಳೂ ಪ್ರಮುಖ ಚರ್ಚಾ ವಿಷಯಗಳಾಗಲಿವೆ.
ನೆದರ್‌ಲ್ಯಾಂಡ್ಸ್ ಜೊತೆ ಸೆಮಿಕಂಡಕ್ಟರ್ ಸಹಕಾರವು ಪ್ರಮುಖ ಕ್ಷೇತ್ರವಾಗಿದೆ ಎಂದು ಜಾರ್ಜ್ ಹೇಳಿದ್ದು, ಯುರೋಪ್ ಪ್ರವಾಸದ ವೇಳೆ ಸುಧಾರಿತ ಸೆಮಿಕಂಡಕ್ಟರ್ ಸಹಭಾಗಿತ್ವ ಮತ್ತು ಐಎಂಇಸಿ ಸಂಬಂಧಿತ ಚರ್ಚೆಗಳು ಪ್ರಮುಖವಾಗಿ ನಡೆಯಲಿವೆ ಎಂದರು.

