HEALTH TIPS

Venezuela ಅಮೆರಿಕದ 51ನೇ ರಾಜ್ಯವಾಗಲಿ ಎಂದ ಟ್ರಂಪ್; ತಿರಸ್ಕರಿಸಿದ ವೆನೆಝುವೆಲಾ ಮಧ್ಯಂತರ ಅಧ್ಯಕ್ಷೆ

ಹೇಗ್: ವೆನೆಝುವೆಲಾ ದೇಶವು ಅಮೆರಿಕದ 51ನೇ ರಾಜ್ಯವಾಗಬಹುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ದೃಢವಾಗಿ ತಿರಸ್ಕರಿಸಿದ್ದಾರೆ.

ಹೇಗ್‌ ನಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಯೊಂದಕ್ಕೆ ಹಾಜರಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 'ಇಂತಹ ಸಾಧ್ಯತೆಯನ್ನು ಎಂದಿಗೂ ಪರಿಗಣಿಸಲಾಗಿಲ್ಲ ಮತ್ತು ಇದು ಸ್ವಾತಂತ್ರ್ಯದ ಬಗ್ಗೆ ದೇಶದ ಬದ್ಧತೆಗೆ ವಿರುದ್ಧವಾಗಿದೆ.

ನಾವು ನಮ್ಮ ಸ್ವಾತಂತ್ರ್ಯ ಪ್ರಕ್ರಿಯೆಯನ್ನು ಪ್ರೀತಿಸುತ್ತೇವೆ' ಎಂದು ಹೇಳಿದ್ದಾರೆ.

ಅಮೆರಿಕದೊಂದಿಗಿನ ಸಂಬಂಧದ ಕುರಿತ ಪ್ರಶ್ನೆಗೆ ರಾಡ್ರಿಗಸ್, 'ತಮ್ಮ ಸರ್ಕಾರವು ರಾಜತಾಂತ್ರಿಕ ಸಹಕಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ' ಎಂದು ಉತ್ತರಿಸಿದ್ದಾರೆ. ಜನವರಿಯಲ್ಲಿ ವೆನೆಝುವೆಲಾದ ಪದಚ್ಯುತ ನಾಯಕ ನಿಕೊಲಸ್ ಮಡುರೊ ಅವರನ್ನು ಅಮೆರಿಕದ ಮಿಲಿಟರಿ ಸೆರೆಹಿಡಿದ ಬಳಿಕ ಟ್ರಂಪ್, ವೆನೆಝುವೆಲಾ ಅಮೆರಿಕದ ನಿಯಂತ್ರಣದಲ್ಲಿ ಇರಬೇಕು ಎಂಬ ಹೇಳಿಕೆಯನ್ನು ಹಲವು ಬಾರಿ ಪುನರುಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries