ಬುನಿಯಾ: ಪೂರ್ವ ಕಾಂಗೊದಲ್ಲಿ ಎಬೋಲಾ ಪ್ರಕರಣಗಳ ಸಂಖ್ಯೆಯು 1003 ದಾಟಿದ್ದು, 254 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 15ರಿಂದ ಕಾಂಗೊದ ಇಟುರಿ ಪ್ರಾಂತ್ಯದಲ್ಲಿ ಸುಮಾರು 100 ಎಬೋಲಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕಾಂಗೊ ಆರೋಗ್ಯ ಸಚಿವಾಲಯ ತಿಳಿಸಿದೆ.
'ಕಳೆದ ವಾರ ಸೋಂಕು ದೃಢಪಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ 35,000ಕ್ಕೂ ಹೆಚ್ಚು ಜನರನ್ನು ಪತ್ತೆಹಚ್ಚಬೇಕಾಗಿದೆ. ದೃಢಪಡದ ಇನ್ನೂ ಅನೇಕ ಪ್ರಕರಣಗಳಿರಬಹುದು. ಎಬೋಲಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು' ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಪರೂಪದ ಬುಂಡಿಬುಗ್ಯೊ ವೈರಸ್‌ನಿಂದ ಎಬೋಲಾ ಹರಡುತ್ತದೆ.

