ಕಾಸರಗೋಡು: ಮನೆಯಲ್ಲಿ ಮಲಗಿದ್ದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಪೋಲೀಸರು 25 ವರ್ಷದ ಬಾಲಕಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ತಳಿಪರಂಬ ಮೂಲದ ಸ್ನೇಹಾ ಮೆರ್ಲಿನ್ ವಿರುದ್ಧ ಮೇಲ್ಪರಂಬ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಆರೋಪಿತ ಬಾಲಕಿ ಮೇಲ್ಪರಂಬ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಹುಡುಗಿಯ ತಾಯಿಯ ಸ್ನೇಹಿತೆ. ಘಟನೆಯ ದಿನ ಆರೋಪಿತೆ ಮನೆಗೆ ಬಂದಿದ್ದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಳು. ಭಯದಿಂದಾಗಿ ಹುಡುಗಿ ಯಾರಿಗೂ ಘಟನೆಯ ಬಗ್ಗೆ ಹೇಳಿರಲಿಲ್ಲ. ಕೌನ್ಸೆಲಿಂಗ್ ಸಮಯದಲ್ಲಿ ಅವಳು ಇದನ್ನು ಬಹಿರಂಗಪಡಿಸಿದಳು. ನಂತರ ಪೋಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 25ರ ಹುಡಿಗಿಯ ಮೇಲೆ ಈಗಾಗಲೇ ತಮ್ಮ ಸಹೋದರ ಮತ್ತು ಸಹೋದರಿಯ ಮೇಲೆ ಅತ್ಯಾಚಾರವೆಸಗಿದ ನಾಲ್ಕು ಪ್ರಕರಣಗಳಿವೆ ಎಂದು ಪೋಲೀಸರು ತಿಳಿಸಿದ್ದಾರೆ.
ಅವರ ಮೇಲೆ ಹಲ್ಲೆ ಪ್ರಕರಣದಲ್ಲೂ ಆರೋಪವಿದೆ. ಕಳೆದ ವರ್ಷ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಸ್ನೇಹಾಳನ್ನು ಬಂಧಿಸಲಾಗಿತ್ತು. ಅತ್ಯಾಚಾರಕ್ಕೊಳಗಾದ ಬಾಲಕಿ ತಳಿಪರಂಬ ಪೋಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯಾಗಿದ್ದಳು. 12 ವರ್ಷದ ಬಾಲಕಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಶಿಕ್ಷಕರು ಪೋಷಕರಿಗೆ ಮಾಹಿತಿ ನೀಡಿದ್ದರು. ನಂತರ ಕೌನ್ಸೆಲಿಂಗ್ ಸಮಯದಲ್ಲಿ ಬಾಲಕಿ ಅತ್ಯಾಚಾರದ ಬಗ್ಗೆ ಬಹಿರಂಗಪಡಿಸಿದ್ದಳು.

