ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂನ್ 21ರಂದು ನಡೆಸಲಿರುವ 'ನೀಟ್-ಯುಜಿ 2026' ಮರು ಪರೀಕ್ಷೆ ಕುರಿತ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಪ್ರಕಟಿಸಿದೆ.
ಪರೀಕ್ಷಾರ್ಥಿಗಳು ವೆಬ್‌ಸೈಟ್‌ನಲ್ಲಿ ಅರ್ಜಿ ಸಂಖ್ಯೆ ಬಳಸಿ ಪರೀಕ್ಷಾ ಕೇಂದ್ರಗಳ ವಿವರ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು 'ಎಕ್ಸ್'ನಲ್ಲಿ ಪ್ರಕಟಿಸಿದೆ.
ಮರುಪರೀಕ್ಷೆ ಜೂನ್ 21ರ ಮಧ್ಯಾಹ್ನ 2ರಿಂದ 5.15ರ ವರೆಗೆ 'ಪೆನ್ -ಪೇಪರ್' ಸ್ವರೂಪದಲ್ಲಿ ವಿವಿಧ 551 ನಗರಗಳು, ವಿದೇಶಗಳ 14 ನಗರಗಳಲ್ಲಿ ನಡೆಯಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ಪರೀಕ್ಷಾ ಕೇಂದ್ರದ ವಿವರಗಳ ಪತ್ರವನ್ನು ಪ್ರವೇಶ ಪತ್ರ ಎಂದು ಪರಿಗಣಿಸಲಾಗುವುದಿಲ್ಲ. ಪ್ರವೇಶಪತ್ರಗಳನ್ನು ನಂತರ ನೀಡಲಾಗುತ್ತದೆ. ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವೀಕ್ಷಿಸುತ್ತಿರಬೇಕು ಎಂದು ಮನವಿ ಮಾಡಿದೆ.
ನೀಟ್-ಯುಜಿ ಪರೀಕ್ಷೆ ಮೇ 3ರಂದು ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಸೋರಿಕೆ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ.

